ಅಭಿವೃದ್ಧಿ ಕೆಲಸ ನಿರ್ವಹಣೆಗೆ ನಿರಂತರ ಪ್ರಯತ್ನ

Sub_development work
Published on

ಸುಬ್ರಹ್ಮಣ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಸ್ತುತ ವಿವಿಧ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ರೀತಿಯ ಸಂಪರ್ಕ ರಸ್ತೆ, ಸೇತುವೆಗಳು ನಿರ್ಮಾಣಗೊಂಡಿವೆ. ಬೇಡಿಕೆ ಇರುವ ಕಡೆಗಳಲ್ಲಿ ರಸ್ತೆ, ಸೇತುವೆ ಸಹಿತ ಎಲ್ಲ ರೀತಿಯ ಅಭಿವೃದ್ಧಿ ಕೆಲಸ ನಿರ್ವಹಿಸಲು ನಿರಂತರ ಪ್ರಯತ್ನ ನಡೆಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯ ಬಾಳುಗೋಡು ಗ್ರಾಮದ ಶಿವಾಲ-ಕಲ್ಲಡ್ಕ ಸಂಪರ್ಕ ರಸ್ತೆ 30 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಹರಿಹರ ಪಳ್ಳತ್ತಡ್ಕ ಗ್ರಾಪಂ ಅಧ್ಯಕ್ಷ ವಿಜಯ ಅಂಙಣ, ಗುತ್ತಿಗೆದಾರ ಈಶ್ವರ್, ಕೊಲ್ಲಮೊಗ್ರು ಗ್ರಾಪಂ ಉಪಾಧ್ಯಕ್ಷ ಮಾಧವ ಚಾಂತಾಳ, ಪ್ರಮುಖರಾದ ಚಂದ್ರಹಾಸ ಶಿವಾಲ, ರಾಧಾಕೃಷ್ಣ ಕಟ್ಟೆಮನೆ, ಸೋಮಶೇಖರ್ ಕಟ್ಟೆಮನೆ, ರೇಷ್ಮಾ ಕಟ್ಟೆಮನೆ, ಸೀತಾರಾಮ ಕಟ್ಟೆಮನೆ, ಜಯಪ್ರಕಾಶ್ ಕೂಜುಗೋಡು, ವಸಂತ ಕಿರಿಭಾಗ, ಸ್ಥಳೀಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net