ಆಲೆಟ್ಟಿ ದೇಗುಲದ ಶೌಚಗೃಹ, ನೀರಿನ ಘಟಕ ಉದ್ಘಾಟನೆ

Published on

ಸುಳ್ಯ: ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಗೃಹ ಹಾಗೂ ಕೈ ತೊಳೆಯುವ ನೀರಿನ ಘಟಕವನ್ನು ಆಲೆಟ್ಟಿ ಗ್ರಾಪಂ ಅಧ್ಯಕ್ಷೆ ವೀಣಾ ವಸಂತ ಉದ್ಘಾಟಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಆಲೆಟ್ಟಿ ಪಂಚಾಯಿತಿ ಸದಸ್ಯರಾದ ಗೀತಾ ಕೋಲ್ಚಾರು, ಶಶಿಕಲಾ ದೋಣಿಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಶ್ರೀಪತಿ ಭಟ್ ಮಜಿಗುಂಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಮಮತಾ ನಾರ್ಕೋಡು, ನಳಿನಿ ರೈ ಆಲೆಟ್ಟಿ ಹಾಗೂ ನವೀನ್ ಕುಮಾರ್ ಗುಂಡ್ಯ, ಕೇಶವ ಮೊರಂಗಲ್ಲು, ಜನಾರ್ದನ, ಶಂಕರ ಪಾಟಾಳಿ ಬಡ್ಡಡ್ಕ, ಚಂದ್ರಶೇಖರ ಕೋಲ್ಚಾರು, ಹುಕ್ರಪ್ಪ ನಾಯ್ಕ ಬಾರ್ಪಣೆ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ದೇವಯ್ಯ ಗೌಡ ಮೊರಂಗಲ್ಲು ನವೀನ್ ಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net