ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಸಂಚು

ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಸಂಚು
Published on

ಹಾಸನ: ಎಡಪಂಥೀಯರು ಸರ್ಕಾರದ ಜತೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಸಂಚು ರೂಪಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ಸಕಲೇಶಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಶಬರಿಮಲೆಯಲ್ಲಿ ಪ್ರಾರಂಭ ಮಾಡಿದ್ದರು. ಅಲ್ಲಿ ಏನು ಮಾಡಲು ಸಾಧ್ಯವಾಗದೆ ಈಗ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರು ಈ ವಿಚಾರವಾಗಿ ನೊಂದುಕೊಂಡಿದ್ದರು, ನಾವು ಭಕ್ತರಾಗಿ ತೆರಳಿ ವೀರೇಂದ್ರ ಹೆಗ್ಗಡೆ ಅವರ ಜತೆ ಸಮಾಲೋಚನೆ ನಡೆಸಿ ಬಂದಿದ್ದೇವೆ. ಇಡೀ ರಾಜ್ಯದಲ್ಲಿ ಭಕ್ತರು ಕೋಪಗೊಂಡಿದ್ದಾರೆ. ಒಂದು ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರಲು ಕೆಲವರು ಪ್ರಾರಂಭ ಮಾಡಿದ್ದಾರೆ.

ಅನಾಮಿಕ ಕ್ರಿಮಿನಲ್ ವ್ಯಕ್ತಿಯಾಗಿದ್ದು, ಎಡಪಂಥೀಯರು ಒಬ್ಬ ವ್ಯಕ್ತಿಯನ್ನು ತಯಾರು ಮಾಡಿ ಸರ್ಕಾರಕ್ಕೆ ನೀಡಿದೆ. ಕಾಂಗ್ರೆಸ್ ಎಡಪಂಥೀಯರ ವಶದಲ್ಲಿದೆ ಎಂದರು.

ದೇವರ ವಿಷಯದಲ್ಲಿ ಯಾರೂ ಕೂಡ ಆಟವಾಡಬಾರದು. ಭಕ್ತರು ಒಂದು ಸಾರಿ ತಿರುಗಿ ಬಿದ್ದರೆ ಕಾಂಗ್ರೆಸ್ ಸ್ಥಿತಿ ಹೇಳತೀರದ್ದಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net