ರಕ್ಕಸಕಲ್ಲುಗಳ ಸಂರಕ್ಷಣೆ ಅಗತ್ಯ

ಕಾನಹೊಸಹಳ್ಳಿ ಸಮೀಪದ ಕುಮತಿ ಗ್ರಾಮದ ಬಳಿಯಿರುವ ಪ್ರಾಚೀನ ಮಾನವನಾಕೃತಿ ಶಿಲ್ಪಗಳ ಮುಂದೆ ಕುಳಿತು ಕೂಡ್ಲಿಗಿ ಅಂಚೆ ಪಾಲಕ ಕೊಟ್ರೇಶ್ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪುರಾತತ್ವ ಇಲಾಖೆ ನಿರ್ದೇಶಕಗೆ ಪತ್ರ ಬರೆದರು.
ಕಾನಹೊಸಹಳ್ಳಿ ಸಮೀಪದ ಕುಮತಿ ಗ್ರಾಮದ ಬಳಿಯಿರುವ ಪ್ರಾಚೀನ ಮಾನವನಾಕೃತಿ ಶಿಲ್ಪಗಳ ಮುಂದೆ ಕುಳಿತು ಕೂಡ್ಲಿಗಿ ಅಂಚೆ ಪಾಲಕ ಕೊಟ್ರೇಶ್ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪುರಾತತ್ವ ಇಲಾಖೆ ನಿರ್ದೇಶಕಗೆ ಪತ್ರ ಬರೆದರು.
Published on

ಕಾನಹೊಸಹಳ್ಳಿ: ಬೃಹತ್ ಶಿಲಾಯುಗಕ್ಕೆ ಸೇರಿದ ಮಾನವಾಕೃತಿಯ ಶಿಲ್ಪಗಳು ದೇಶದಲ್ಲಿ ಅಪರೂಪವಾಗಿದ್ದು, ಈ ಪ್ರಾಚೀನ ಸ್ಮಾರಕಗಳನ್ನು ರಾಜ್ಯ ಪುರಾತತ್ವ ಇಲಾಖೆ ರಕ್ಷಿಸಬೇಕು ಎಂದು ಕೂಡ್ಲಿಗಿ ಅಂಚೆ ಪಾಲಕ ಕೊಟ್ರೇಶ್ ಆಗ್ರಹಿಸಿದ್ದಾರೆ.

ಕುಮತಿ ಗ್ರಾಮದಲ್ಲಿ ಗುರುವಾರ ಎರಡು ಪ್ರಾಚೀನ ಸ್ಮಾರಕಗಳ ಮುಂದೆ ಕುಳಿತು ಮುಖ್ಯಮಂತ್ರಿ ಹಾಗೂ ಕರ್ನಾಟಕ ಪುರಾತತ್ವ ಇಲಾಖೆ ನಿರ್ದೇಶಕಗೆ ಪತ್ರ ಬರೆದು ಈ ಕುರಿತು ಒತ್ತಾಯ ಮಾಡಿದ್ದಾರೆ. ಬೃಹತ್ ಶಿಲಾಯುಗದ ಸ್ಮಾರಕಗಳು ದೇಶದಲ್ಲಿ ಆಪರೂಪವಾಗಿವೆ. ಈಗ ಎರಡು ರಕ್ಕಸಕಲ್ಲುಗಳು ಮಾತ್ರ ಉಳಿದಿವೆ. ಅಲ್ಲದೆ, ಮನುಷ್ಯನ ಮೂಡನಂಬಿಕೆ ಮತ್ತು ಸ್ವಾರ್ಥದಿಂದ ನಿಧಿ ಸಿಗಬಹುದು ಎನ್ನುವ ಆಸೆಯಿಂದ ರಕ್ಕಸ ಕಲ್ಲುಗಳನ್ನು ಹಾಳು ಮಾಡಲಾಗಿದೆ. ರಾಜ್ಯ ಪುರಾತತ್ವ ಇಲಾಖೆ ಇದನ್ನು ಗಮನಿಸುತ್ತಿಲ್ಲ. ಈ ಕಲ್ಲುಗಳನ್ನು ಗ್ರಾಮಸ್ಥರು ದೇವರಂತೆ ನೋಡುತ್ತಾರೆ. ಹಬ್ಬ, ಹರಿದಿನಗಳಲ್ಲಿ ಪೂಜೆ ಮಾಡುತ್ತಾರೆ. ಜಮೀನಿನಲ್ಲಿ ವರ್ಷದ ಮೊದಲ ಬಿತ್ತನೆ ಮಾಡುವಾಗ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಈ ಕಲ್ಲುಗಳು ಯುವಜನಾಂಗದ ತಿಳುವಳಿಕೆಗಾಗಿ ಉಳಿಯುವುದು ಅಗತ್ಯ. ಆದ್ದರಿಂದ ರಕ್ಕಸಕಲ್ಲುಗಳ ಉಳಿವಿಗಾಗಿ ಶ್ರಮಿಸಬೇಕು ಎಂದು ಪತ್ರ ಬರೆದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net