ಲಾಕ್​​ಡೌನ್​ ರೂಲ್ಸ್​​ ಬ್ರೇಕ್ ಮಾಡಿ ಡ್ರಾಮಾ ಮಾಡಿದ ಕೈ ಮುಖಂಡ !

seize
ಸಾಂದರ್ಭಿಕ ಚಿತ್ರ
Published on

ಬೆಂಗಳೂರು : ಲಸಿಕೆ ಹಾಕಿಸಿಕೊಳ್ಳೋ ನೆಪದಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದ ಕಾಂಗ್ರೆಸ್​ ನಾಯಕರೊಬ್ಬರನ್ನು ತಡೆದ ನಗರ ಪೊಲೀಸರಿಗೆ ಫುಲ್ ಹೈಡ್ರಾಮಾ ನೋಡುವ ಅವಕಾಶ ಸಿಕ್ಕಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ (ಕೆಪಿಸಿಸಿ) ಸಂಚಾಲಕರಾದ ಬಾಲಾಜಿ ಲಾಕ್​ಡೌನ್​ ರೂಲ್ಸ್​ ಬ್ರೇಕ್ ಮಾಡಿ ಸಿಕ್ಕಿಬಿದ್ದಿದ್ದಾರೆ.

ಆಡಿ ಕ್ಯೂ7 ಕಾರಿನಲ್ಲಿ ಬೇಕಾ ಬಿಟ್ಟಿ ಸಂಚಾರ ಮಾಡುತ್ತಿದ್ದ ಬಾಲಾಜಿ ಅವರನ್ನು ಸಿಟಿ ಮಾರ್ಕೆಟ್​ ಸಮೀಪ ಪೊಲೀಸರು ತಡೆದಾಗ, ಮೊದಲಿಗೆ "ನಾನೊಬ್ಬ ಕರೋನ ವಾರಿಯರ್" ಎಂದು ಅವರು ಹೇಳಿದ್ದಾರೆ. ಆಮೇಲೆ, "ವ್ಯಾಕ್ಸಿನ್ ಹಾಕಿಸೋದಕ್ಕೆ ಹೋಗ್ತಾ ಇದೀನಿ. 10 ಜನ ಇದ್ದಾರೆ, ಅವರಿಗೆ ವ್ಯಾಕ್ಸಿನ್ ಕೊಡಿಸೋಕೆ ಹೋಗ್ತಾ ಇದೀನಿ" ಎಂದಿದ್ದಾರೆ.

ಬಳಿಕ "ನಾನು ನನ್ನ ಸ್ನೇಹಿತನಿಗೆ ವ್ಯಾಕ್ಸಿನ್ ಹಾಕಿಸೋಕೆ ಹೊರಟಿರುವೆ" ಎಂದು ಮಾತು ಬದಲಿಸಿದ ಬಾಲಾಜಿ, ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಯಾವುದೇ ದಾಖಲಾತಿಯಿಲ್ಲದೆ, ಬೇಕಾಬಿಟ್ಟಿ ಓಡಾಡೋಕೆ ಸುಳ್ಳು ಹೇಳುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಬಾಲಾಜಿ ಜೊತೆಯಿದ್ದ ವ್ಯಕ್ತಿ ಫುಲ್ ಆ್ಯಕ್ಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. "ನಾನು ಕರೋನ ಪೇಷೆಂಟ್. ನನ್ನ ಬಳಿ ಬರಬೇಡಿ. ವಿಡಿಯೋ ಚಿತ್ರಿಕರಣ ಮಾಡ್ಬೇಡಿ" ಎಂದು ಹೈ ಡ್ರಾಮಾ ಮಾಡಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net