ಗೋಳು ಹೇಳಿಕೊಳ್ಳುವ ಪ್ರಧಾನಿಗೆ ಪ್ರಿಯಾಂಕ ಬಳಿಕ ರಾಹುಲ್ ಗುದ್ದು

Rahul_Tvk
Published on


ತುರುವೇಕೆರೆ
ಈ ವಿಧಾನಸಭೆ ಚುನಾವಣೆಯು ಪ್ರಧಾನಮಂತ್ರಿ ಗೋಳು ಹೇಳಿಕೊಳ್ಳಲಿಕ್ಕೋಸ್ಕರ ಅಲ್ಲ, ಕರ್ನಾಟಕದ ಭವಿಷ್ಯ ನಿರ್ಮಾಣಕ್ಕೆ ನಡೆಯಬೇಕು ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ ಕುಟುಕಿದರು.


ತುರುವೇಕೆರೆ ಪಟ್ಟಣದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.


ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ವೇಳೆ ಮೋದಿ ತನ್ನನ್ನು ನಿಂದಿಸಿದ ಲೆಕ್ಕ ಕೊಡುತ್ತಾರೆ ಹೊರತು ಈ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಭರವಸೆ ಮಾತುಗಳನ್ನಾಡುತ್ತಿಲ್ಲ. ಈ ಚುನಾವಣೆ ಬದಲಾವಣೆ ಬಯಸಿರುವ ರಾಜ್ಯದ ಜನರಿಗಾಗಿ ನಡೆಯುತ್ತಿದೆ ಎಂಬುದನ್ನು ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕಿದೆ. ನಿರುದ್ಯೋಗ ಯುವಕರು, ತಾಯಂದರಿಗೋಸ್ಕರ ನಡೆಯುತ್ತಿರುವ ಚುನಾವಣೆ ಇದಾಗಿದೆ. ಇಲ್ಲಿನ ಜನರ ಭಾವನೆಗಳ ಬಗ್ಗೆ ಮಾತನಾಡಬೇಕು ಎಂದರು.


ಶಾಸಕರಿಗೆ ಹಣ ಕೊಟ್ಟು ಖರೀದಿ ಮಾಡಿ ಲೋಕತಂತ್ರವನ್ನು ಹಾಳುಗೆಡವಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಕಳೆದ 3 ವರ್ಷಗಳಿಂದ ಕರ್ನಾಟಕವು ಇಡೀ ದೇಶದಲ್ಲಿ ಕೇವಲ ಭ್ರಷ್ಟಾಚಾರಕ್ಕೆ ಹೆಸರಾಗಿದೆ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಜನ ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net