ಭಾನುವಾರದ ಬಾಡೂಟಕ್ಕಾಗಿ ಕೋಳಿ ಮಾಂಸ ವಿತರಿಸಿದ ಕಾಂಗ್ರೆಸ್​ ನಾಯಕ!

congress
Published on

ಆನೇಕಲ್​: ಕರೊನಾದ ಕಷ್ಟ ಕಾಲದಲ್ಲಿ ಅನೇಕರು ದಿನಸಿ ಕಿಟ್​ಗಳನ್ನು ವಿತರಣೆ ಮಾಡುತ್ತಿರುವುದನ್ನು ನೋಡಿರುತ್ತೀರಿ. ಇನ್ನೂ ವಿಶೇಷವೆಂದರೆ ಇಂದು ಭಾನುವಾರವಾಗಿರುವುದರಿಂದ ಜನರು ಬಾಡೂಟ ಮಾಡಲಿ ಎಂದು ಕಾಂಗ್ರೆಸ್ ನಾಯಕರೊಬ್ಬರು ಕೋಳಿ ಮಾಂಸವನ್ನೇ ವಿತರಿಸಿದ್ದಾರೆ.

ಬೊಮ್ಮನಹಳ್ಳಿ ಮಾಜಿ ಕಾರ್ಪೊರೇಟರ್ ಶೋಭಾ ರಾಘವೇಂದ್ರ ಕೋಳಿ ಮಾಂಸ ಹಂಚಿದ ನಾಯಕ. ಅವರು ಮಂಗಮ್ಮನ ಪಾಳ್ಯ ಬಳಿ ಉಚಿತವಾಗಿ ಕೋಳಿ ಮಾಂಸ ವಿತರಣೆ ಮಾಡಿದ್ದಾರೆ. ಸುಮಾರು 4000ಕ್ಕೂ ಹೆಚ್ಚು ಕೋಳಿಗಳ ಮಾಂಸವನ್ನು ಹಂಚಲಾಗಿದೆ. ಗಾಡಿಗಳಲ್ಲಿ ಮಾಂಸದ ಪ್ಯಾಕೆಟ್​ಗಳನ್ನಿಟ್ಟುಕೊಂಡು ಬಡ ಜನರಿಗೆ ಹಂಚಲಾಗಿದೆ. ಸಾಲುಸಾಲಾಗಿ ಸೇರಿದ ಜನರು ಮಾಂಸ ಸ್ವೀಕರಿಸಿ ಮನೆಗೆ ತೆರಳಿದ್ದಾರೆ. ಗಂಟೆಗಟ್ಟಲೆ ಸಮಯ ಜನರು ಸಾಲಲ್ಲಿ ನಿಂತಿದ್ದಾಗಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net