ಡಾ.ಜಿ. ಪರಮೇಶ್ವರ್​ ಸಿಎಂ ಆಗಬೇಕು: ಕಾಂಗ್ರಸ್​ ಮುಖಂಡ ಬಿ.ವಿ. ಜಯರಾಮ

DCM
Published on

ಬೆಂಗಳೂರು: ಮುಂದಿನ ದಿನಗಳಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್​ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂಬುದು ನಾಡಿನ ಕೋಟ್ಯಂತರ ಜನರ ಅಭಿಲಾಷೆ ಎಂದು ಕಾಂಗ್ರೆಸ್​ ಮುಖಂಡ ಬಿ.ವಿ. ಜಯರಾಮ ಅಭಿಪ್ರಾಯಪಟ್ಟರು.

ಅವರು ಡಾ.ಜಿ. ಪರಮೇಶ್ವರ್​ ಹುಟ್ಟು ಹಬ್ಬದ ಪ್ರಯುಕ್ತ ಮಾಗಡಿ ತಾಲೂಕಿನ ಮುಳ್ಳುಕಟ್ಟಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಬಡವರಿಗೆ ಉಚಿತ ಬಟ್ಟೆ, ಮಹಿಳೆಯರಿಗೆ ಸೀರೆ ವಿತರಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್​ ಮುಖಂಡರಾದ ಸುನಿಲ್​ ಪ್ರಕಾಶ್​, ಜಗದೀಶ್​, ಜಯಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net