

* ಶಾಸಕ ಎಚ್.ಸಿ. ಬಾಲಕೃಷ್ಣ ಬಮೂಲ್ಗೆ ಮನವಿ
ರಾಮನಗರ
ಬಮೂಲ್ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಬೆಲೆ ನೀಡಿ ಹಾಲು ಖರೀದಿಸಿ ನೆರವಿನ ಹಸ್ತ ಚಾಚಬೇಕು ಎಂದು ಕೆಆರ್ಡಿಎಲ್ ಅಧ್ಯಕ್ಷ, ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕೂಟಗಲ್ ಹೋಬಳಿ ಅಂಕನಹಳ್ಳಿಯಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರಿಗೆ ಪ್ರಸ್ತುತ ಒಕ್ಕೂಟದಿಂದ ನೀಡುತ್ತಿರುವ ಹಣ ಏನೇನೂ ಸಾಲದು. ಬೇರೆ ರಾಜ್ಯಗಳಲ್ಲಿನ ಹಾಲಿನ ಧರಕ್ಕೆ ಹೋಲಿಸಿದಾಗ ನಮ್ಮ ರಾಜ್ಯದಲ್ಲಿ ನೀಡುತ್ತಿರುವ ಧರ ತೀರಾ ಕಡಿಮೆಯಿದೆ. ಬಮೂಲ್ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 2 ರಿಂದ 3 ರೂ. ಹೆಚ್ಚಿಸುವ ಮೂಲಕ ಹೈನುಗಾರರ ನೆರವಿಗೆ ನಿಲ್ಲಬೇಕು.
ರೈತರಿಗೆ ಕಳೆದ 3 ತಿಂಗಳಿಂದ ಹಾಲಿನ ಸಹಾಯಧನ ನೀಡಿಲ್ಲವೆಂಬ ದೂರುಗಳಿವೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಹೈನುಗಾರಿಕೆ ಕಸುಬನ್ನೆ ನಂಬಿರುವ ಅನೇಕ ರೈತಕುಟುಂಬಗಳಿಗೆ ಇಂದು ಹಾಲಿನ ಡೇರಿಗಳು ಜೀವನಾಧಾರವಾಗಿವೆ. ಗ್ರಾಮಾಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಗಳು ಪ್ರಮುಖ ಪಾತ್ರವಹಿಸಿವೆ. ಹಾಗೆಯೇ ಬಡವರು ಬದುಕು ಕಟ್ಟಿಕೊಳ್ಳುವ ಪುಣ್ಯ ಸ್ಥಳವೂ ಆಗಿರುವ ಹಾಲಿನ ಡೇರಿಗಳು ದೇವಾಲಯಗಳಷ್ಟೇ ಪವಿತ್ರವಾಗಿವೆ ಎಂದರು.
ಹೈನುಗಾರಿಕೆಯಲ್ಲಿಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದು, ಹಲವೆಡೆ ಮಹಿಳೆಯರೇ ಪ್ರತ್ಯೇಕವಾಗಿ ಹಾಲಿನ ಡೇರಿಗಳನ್ನು ಸ್ಥಾಪಿಸಿಕೊಂಡು ಲಾಭದಲ್ಲಿ ನಡೆಸುತ್ತಿರುವುದು ಕಂಡುಬಂದಿದೆ. ಇದರ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದ ಅಸಂಖ್ಯಾತ ಬಡಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಲೆಲ್ಲ. ಮಹಿಳೆಯರು ಹಾಗೂ ಬಡಕುಟುಂಬಗಳಿಗೆ ಉಪಯಕ್ತ ಯೋಜನೆಗಳನ್ನು ನೀಡುತ್ತಿದ್ದಾರೆ. ಅಂಕನಹಳ್ಳಿ&ಮಾಗಡಿ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಶ್ರೀವೇ ಕಾಮಗಾರಿ ಆರಂಭವಾಗಲಿದೆ. ಅಂಕನಹಳ್ಳಿಯ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ತಾಪಂ ಮಾಜಿ ಅಧ್ಯಕ್ಷರಾದ ಮಹದೇವಯ್ಯ, ಜಗದೀಶ್. ಅಂಕನಹಳ್ಳಿ ಹಾಲು ಉತ್ಪಾದಕರ ಸಂದ ಅಧ್ಯಕ್ಷ ಸುರೇಶ್, ಉಪಾಧ್ಯೆ ಜಯಲಕ್ಷ್ಮಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಇದ್ದರು.