ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Gur_Manavi
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್, ಗ್ರಾಮೀಣಾಭಿವದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿವಿಧ ಸಾವಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೋ ಹರಿಯಬಿಟ್ಟಿರುವ ಮೋಹಿತ್ ನರಸಿಂಹಮೂರ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕೆಪಿಸಿಸಿ ಸದಸ್ಯ ಆರ್.ಕೆ.ಪೃಥ್ವಿರಾಜ್​​​ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಭಾನುವಾರ ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಅವರಿಗೆ ಮನವಿ ನೀಡಿತು.

ವೈರಲ್ ಆದ ವಿಡಿಯೋದಲ್ಲಿ ಸಾರ್ವಜನಿಕ ಶಾಂತಿ ಕದಡುವ ಮತ್ತು ಅಪರಾಧವೆಸಗಲು ಪ್ರಚೋದಿಸುವ ಅಂಶಗಳಿವೆ. ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಅವವಾನಿಸುವುದರ ಜತೆಗೆ ಎರಡು ಪಂಗಡಗಳ ಮಧ್ಯೆ ದ್ವೇಷ ಪ್ರಚೋದಿಸುವ ಉದ್ದೇಶವಿದೆ. ಆದ್ದರಿಂದ ಮೋಹಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.

ನಿಯೋಗದಲ್ಲಿ ಗುರುಪುರ ಬ್ಲಾಕ್ ಅಲ್ಪಸಂಖ್ಯಾತರ ಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಬಾಷಾ, ಗಂಜಿಮಠ ವಲಯ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ, ಪಡುಪೆರಾರ ವಲಯ ಕಾಂಗ್ರೆಸ್ ಅಧ್ಯಕ್ಷ ಹಲ್ಯರ್ ಇಕ್ಬಾಲ್, ಜಿ.ಪಂ. ವಾಜಿ ಸದಸ್ಯ ಕೃಷ್ಣ ಅಮೀನ್, ತಾ.ಪಂ. ವಾಜಿ ಸದಸ್ಯ ಸುನೀಲ್ ಗಂಜಿಮಠ, ಪಡುಪೆರಾರ ಗ್ರಾಪಂ ಸದಸ್ಯ ಭಾಸ್ಕರ ಮಲ್ಲಿ, ಡಿಸಿಸಿ ಸದಸ್ಯ ಜೆರಾಲ್ಡ್ ಸಿಕ್ವೇರ ಕೊಳಂಬೆ, ಪಕ್ಷದ ಯುವ ನಾಯಕ ಅಬ್ದುಲ್ ಹಮೀದ್ ಎಡಪದವು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net