

ತುಮಕೂರು: ಯುಗಾದಿ ಮರುದಿನವಾದ ಬುಧವಾರ ಹೊಸತಡಕು ಸಂಭ್ರಮದಲ್ಲಿ ಜನರಿದ್ದು ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಸಚಿವದ್ವಯರ ಅನುಪಸ್ಥಿತಿಯಲ್ಲಿ ಕೊರಟಗೆರೆ- ಮಧುಗಿರಿ ಕ್ಷೇತ್ರದಲ್ಲಿ ಏಕಾಂಗಿಯಾಗೇ ಮಿಂಚಿನ ಸಂಚಾರ ನಡೆಸಿದರು.
ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿ ತಾಡಿ ಗ್ರಾಮದ ಐತಿಹಾಸಿಕ ಶ್ರೀ ವೀರನಾಗಮ್ಮ ದೇವಿ ಜಾತ್ರಾಮಹೋತ್ಸವದಲ್ಲಿ ಎಸ್ಪಿಎಂ ಭಾಗಿಯಾದರು. ಆಂಧ್ರಪ್ರದೇಶದ ಮಾಜಿ ಸಚಿವ ನರಸೇಗೌಡ, ಮುಖಂಡರಾದ ಬಿ.ವಿ.ನಾಗರಾಜಪ್ಪ, ಪಿ.ಟಿ.ಗೋವಿಂದಪ್ಪ, ನಾಗೇಶ್‌ಬಾಬು ಮತ್ತಿತರರು ಸಾಥ್ ನೀಡಿದರು.
ಅಲ್ಲಿಂದ ಕೊರಟಗೆರೆ ತಾಲೂಕು ವಡ್ಡಗೆರೆ ಶ್ರೀ ವೀರನಾಗಮ್ಮ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಮುದ್ದಹನುಮೇಗೌಡ ಭಕ್ತಾದಿಗಳಿಗೆ ಪ್ರಸಾದ ಬಡಿಸಿದರು. ಈ ವೇಳೆ ಹನುಮಂತನಾಥ ಸ್ವಾಮೀಜಿ ಇದ್ದರು.
ವೀರಣ್ಣ ಭೇಟಿ: ಮಾಜಿ ಸಚಿವ ವೀರಣ್ಣರನ್ನು ಭೇಟಿಯಾದ ಮುದ್ದಹನುಮೇಗೌಡ ಮಾರ್ಗದರ್ಶನ ಪಡೆದರು.