

ತುಮಕೂರು: ನಗರದ ಮರಳೂರಿನ 2 ಎಕರೆ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಅಕ್ರಮವಾಗಿ ನೋಂದಣಿ ಮಾಡಿ ಇ&ಸ್ವತ್ತು ನೀಡಿರುವ ಪಾಲಿಕೆ ಕಂದಾಯ ಆಯುಕ್ತಗೆ ಬಿಜೆಪಿ ಕಾರ್ಯಕರ್ತರು "ಸನ್ಮಾನಿಸಲು' ಮುಂದಾದಾಗ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿಗರು ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಭವನ ನೋಂದಣಿ ಮಾಡಿಕೊಂಡಿರುವ ಅಕ್ರಮ ದಾಖಲಾತಿಗಳನ್ನು ಬಿಡುಗಡೆಗೊಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ನೇರವಾಗಿ ಪದಾಧಿಕಾರಿಗಳೊಂದಿಗೆ ಪಾಲಿಕೆ ಕಚೇರಿಗೆ ತೆರಳಿ, ಕಂದಾಯ ಆಯುಕ್ತ ರುದ್ರಮುನಿರನ್ನು ಸನ್ಮಾನಿಸಲು ಮುಂದಾದರು. ಈ ವೇಳೆ ಪ್ರತ್ಯೇಕ ಪೋಡಿಲ್ಲದೆ ಬಹು ಖಾಸಗಿ ಮಾಲಿಕತ್ವವಿರುವ ಸರ್ವೆ ಸಂಖ್ಯೆಯಲ್ಲಿರುವ ಭೂಮಿಯನ್ನು ಇ&ಖಾತಾ ಮಾಡಲಾಗಿದೆ. ಕರ್ನಾಟಕ ರೆವಿನ್ಯೂ ಆಕ್ಟ್ ಸೆಕ್ಷನ್ 129 ಪ್ರಕಾರ ಒಂದು ಸರ್ವೆ ನಂಬರ್ನ ಭೂಮಿಯನ್ನು ವಿಭಜಿಸಿ ಬೇರೆಬೇರೆ ಪೋಡಿ/ ಸ್ಕೆಚ್ ಅತ್ಯಗತ್ಯವಿದ್ದರು ಇ&ಖಾತೆ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿದರಲ್ಲದೆ ಕಂದಾಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಕುರ್ಚಿಯಿಂದ ಮೇಲೆದ್ದ ರುದ್ರಮುನಿ ತಕ್ಷಣವೇ ಅಲ್ಲಿಂದ ನುಣುಚಿಕೊಂಡು ಹೊರಬಂದು ಪೊಲೀಸರಿಗೆ ಕರೆ ಮಾಡಿದರು. ನನಗು ಇದಕ್ಕು ಸಂಬಂಧವಿಲ್ಲ ಆಯುಕ್ತರ ಬಳಿ ಹೋಗೋಣ ಬನ್ನಿ ಎಂದು ಮೊದಲಮಹಡಿಯಿಂದ ಕೆಳಗಿಳಿದ ರುದ್ರಮುನಿಯನ್ನು ಬಿಜೆಪಿ ಕಾರ್ಯಕರ್ತರು ಶಾಲು&ಹಾರ ಹಿಡಿದು ಹಿಂಬಾಲಿಸಿಕೊಂಡು ಬರುತ್ತಿದ್ದಂತೆ ಅಷ್ಟರಲ್ಲಿ ಪೊಲೀಸರು ಪ್ರತ್ಯಕ್ಷರಾದರು. ಈ ವೇಳೆ ಕಾರ್ಯಕರ್ತರನ್ನು ತಡೆದ ಪೊಲೀಸರು "ಸನ್ಮಾನ'ಕ್ಕೆ ಅವಕಾಶ ಕೊಡಲಿಲ್ಲ. ಪೊಲೀಸರು&ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿ ಅಕ್ರಮವಾಗಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಮೀನು ನೋಂದಣಿ ಮಾಡಿರುವುದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್.ಎಸ್.ರವಿಶಂಕರ್ ಎಚ್ಚರಿಕೆ ನೀಡಿದರು.
ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಗಂಗರಾಜು, ಕೆ.ಧನುಷ್, ವಿರೂಪಾಕ್ಷಪ್ಪ, ಜೆ.ಜಗದೀಶ್, ಹನುಮಂತರಾಜು, ಮರಿತಿಮ್ಮಯ್ಯ, ಕೆ.ಎಸ್.ಕುಮಾರ್, ರಕ್ಷಿತ್ ಮೊದಲಾದವರಿದ್ದರು.
ಕಾಂಗ್ರೆಸ್ ಭವನದ ಹೆಸರಿಗೆ ನೋಂದಣಿ 2 ಎಕರೆ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಗೆ ಮಂಜೂರಾತಿ ಪ್ರಸ್ತಾವನೆ ಇದೆ. ಆದರೆ ಆದೇಶದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ಎಂದು ಮಂಜೂರು ಮಾಡಿರುತ್ತಾರೆ. ಸಂಪುಟದ ಆದೇಶವೇ ಅತ್ಯಂತ ಅಸ್ಪಷ್ಟ ಮತ್ತು ಗೊಂದಲವಾಗಿದೆ ಎಂದು ಜಿಲ್ಲಾಧ್ಯಕ್ಷ ರವಿಶಂಕರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 1943ರಲ್ಲಿ ಮೈಸೂರು ಮಹಾ ಸಂಸ್ಥಾನದ ರಾಜ್ಯ ಪತ್ರದ ಅನ್ವಯ ಮರಳೂರು ಗ್ರಾಮದ ಸರ್ವೆ ನಂ. 87/1 ಮತ್ತು 87/2ರಲ್ಲಿ ತಲಾ 2 ಎಕರೆ ಒಟ್ಟು 4 ಎಕರೆ ಜಮೀನನ್ನು "ಫಾರ್ ಡಂಪಿಂಗ್ ಸ್ಟ್ರೀಟ್ ಸ್ವೀಪಿಂಗ್ ನೈಟ್ ಸಾಯಿಲ್' ಉದ್ದೇಶಕ್ಕೆ ತುಮಕೂರು ಮುನ್ಸಿಪಲ್ಗೆ ಭೂಸ್ವಧಿನವಾಗಿರುತ್ತದೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ ಜಮೀನಿನ ರೈತರು ಹಾಗೂ ಮಹಾನಗರ ಪಾಲಿಕೆ ಮಧ್ಯೆ ನ್ಯಾಯಾಲಯಗಳಲ್ಲಿ ಪ್ರಕರಣ ಚಾಲ್ತಿಯಲ್ಲಿವೆ. ಸರ್ವೆ ನಂ. 87/1ಕ್ಕೆ ಸಂಬಂಧಪಟ್ಟಂತೆ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ದೊರೆತು ಒಂದು ಬಾರಿ ಮಹಾನಗರಪಾಲಿಕೆಯ ಸ್ವಾಧಿನದಿಂದ ತೆರವುಗೊಳಿಸಿ ಯಥಾಸ್ಥಿತಿಯನ್ನು ಕಾಯ್ದಿರಿಸಿದೆ. ಸರ್ವೆ ನಂ. 87/2ಕ್ಕೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಈ ಜಮೀನಿಗೆ ಪ್ರತ್ಯೇಕ ಪೋಡಿ ಇಲ್ಲ. ಪ್ರತ್ಯೇಕ ಆರ್ಟಿಸಿ ಬಂದ ನಂತರವೇ ಮಹಾನಗರಪಾಲಿಕೆ ಇ-&ಖಾತೆ ಮಾಡಲು ಸಾಧ್ಯ. ಆದರೆ ಇದನ್ನು ಪೂರ್ಣ ಉಲ್ಲಂಘಿಸಲಾಗಿದೆ. ಕಾನೂನಿನ ಪ್ರಕಾರ ಯಾವುದೇ ಅಂಶಗಳನ್ನು ಪೂರೈಸದೆ ತರಾತುರಿಯಲ್ಲಿ ಮಹಾನಗರಪಾಲಿಕೆ ಆ.7ರಂದು ಇ-&ಖಾತೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ, ಸಚಿವ ಸಂಪಟದ ಆದೇಶದಂತೆ ಮಾರ್ಗಸೂಚಿ ಮೌಲ್ಯ ಶೇ.5ರಷ್ಟು ಬೆಲೆ ವಿಧಿಸಿ ನೋಂದಣಿ ಮಾಡಬೇಕೆಂದು ಷರತ್ತು ವಿಧಿಸಿದ್ದರು ಮಾರ್ಗಸೂಚಿ ಮೌಲ್ಯಕ್ಕಿಂತಲು ಕಡಿಮೆ ಬೆಲೆಗೆ ನೋಂದಣಿ ಮಾಡಿ ಮುದ್ರಾಂಕ ಶುಲ್ಕದಲ್ಲಿಯೂ ಅಕ್ರಮ ಎಸಗಲಾಗಿದೆ. ಎಚ್.ಎಸ್.ರವಿಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಭವನ ಟ್ರಸ್ಟ್ನ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೆವಾಲ ಮತ್ತಿತರರು ಟ್ರಸ್ಟಿಗಳು. ಇದು ಖಾಸಗಿ ಟ್ರಸ್ಟ್. ಹೀಗಿರುವಾಗ ಖಾಸಗಿಯವರ ವೈಯಕ್ತಿಕ ಹಿತಾಸಕ್ತಿಗಾಗಿ ಸಚಿವ ಸಂಪುಟದಲ್ಲಿ ಈ ರೀತಿಯ ತೀಮಾರ್ನ ಮಾಡಲು ಅವಕಾಶವಿಲ್ಲ, ಇಲ್ಲಿಯೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಟಿ.ಎಚ್.ಹನುಮಂತರಾಜು ಮಾಜಿ ನಗರಾಧ್ಯಕ್ಷ ಬಿಜೆಪಿ ರೌಡಿಗಳಂತೆ ವರ್ತನೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿದ್ದ ಜಮೀನನ್ನು ಅಕ್ರಮವಾಗಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ನೋಂದಣಿ ಮಾಡುವುದನ್ನು ವಿರೋಧಿಸಿ ಪ್ರಶ್ನೆ ಮಾಡಲು ಉಪನೋಂದಣಾಧಿಕಾರಿಗಳ ಕಚೇರಿಗೆ ಹೋದ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸರು ಕಾಂಗ್ರೆಸ್ ಪರವಾಗಿ ಬಂದ ರೌಡಿಗಳಂತೆ ವರ್ತಿಸಿದರು. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಕಚೇರಿಯಿಂದ ಹೊರದಬ್ಬಿದರು. ಇದೇನು ಗೂಂಡಾ ರಾಜ್ಯವೆ? ಎಂದು ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಕಿಡಿಕಾರಿದರು. ಜಮೀನು ವಿವಾದಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋದರೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಕೋರ್ಟಿಗೆ ಹೋಗಿ ಎಂದು ಹೇಳುವ ಪೊಲೀಸರು, ಈ ಪ್ರಕರಣದಲ್ಲಿ ಯಾವ ಉದ್ದೇಶದಿಂದ ಪ್ರವೇಶ ಮಾಡಿದರು? ಪೊಲೀಸರಿಗೆ ನೀತಿ, ನಿಯಮಗಳಿಲ್ಲವೆ? ದೌರ್ಜನ್ಯ ಮಾಡಿದ ಪೊಲೀಸರು ಹಾಗೂ ಅಕ್ರಮವಾಗಿ ಜಮೀನು ನೋಂದಣಿ ಮಾಡಿದ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.