ಹುಟ್ಟೂರಿನಲ್ಲೇ ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಮಾಜಿ ಶಾಸಕ!

Donation Collection SG Nanjayanamatha
Published on

ಬಾಗಲಕೋಟೆ: ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ಶುಕ್ರವಾರ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದರು.

ಬಾಗಲಕೋಟೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆದ ನಂಜಯ್ಯನಮಠ ಹುಟ್ಟೂರು ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಭಿಕ್ಷೆ ಬೇಡಿದರು. ಅಲ್ಲಿ ಬರೋಬ್ಬರಿ 59 ಸಾವಿರ ಹಣ ಸಂಗ್ರಹವಾಗಿದೆ.

ನವನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಐವತ್ತು ಲಕ್ಷ ರೂ. ಬೇಕಿದೆ. ಹಾಗಾಗಿ ಜೋಳಿಗೆ ಹಿಡಿದು ಭಿಕ್ಷಾಟನೆ ಮೂಲಕ ದೇಣಿಗೆ ಸಂಗ್ರಹಿಸುವ ಕಾಯಕದಲ್ಲಿ ಮಾಜಿ ಶಾಸಕರು ನಿರತರಾಗಿದ್ದಾರೆ.

ಭವನ ಕಟ್ಟಡಕ್ಕಾಗಿ ಹಳ್ಳಿ ಹಳ್ಳಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಹಂತ- ಹಂತವಾಗಿ ಭಿಕ್ಷಾಟನೆ ಮೂಲಕ ನಂಜಯ್ಯನಮಠ ಅವರು ಹಣ ಸಂಗ್ರಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net