ಹುದ್ದೆ ಜವಾಬ್ದಾರಿಯೇ ಹೊರತು ಅಧಿಕಾರವಲ್ಲ : ಪದ್ಮರಾಜ್ ಪೂಜಾರಿ ಹೇಳಿಕೆ

10
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹುದ್ದೆ ಜವಾಬ್ದಾರಿಯೇ ಹೊರತು ಅಧಿಕಾರವಲ್ಲ. ಜವಾಬ್ದಾರಿ ಅರಿತು ಪಕ್ಷದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಹೇಳಿದರು.

ಉಳ್ಳಾಲ ಬ್ಲಾಕ್ ಆಶ್ರಯದಲ್ಲಿ, ಹಿಂದುಳಿದ ವರ್ಗಗಳ ಘಟಕ, ಮಹಿಳಾ ಸಮಿತಿ ಸಹಕಾರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ರಾಜ್ಯ ಸದಸ್ಯರಾಗಿ ನೇಮಕಗೊಂಡಿರುವ ಪ್ರತಿಭಾ ಕುಳಾಯಿ ಅವರಿಗೆ ತೊಕ್ಕೊಟ್ಟಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಪ್ರತಿಭಾ ಕುಳಾಯಿ ಮಾತನಾಡಿ, ಅಧಿಕಾರ ತಾನಾಗಿಯೇ ಬರಬೇಕೆನ್ನುವ ನೆಲೆಯಲ್ಲಿ ಇದುವರೆಗೆ ಪಕ್ಷದಲ್ಲಿ ಯಾವುದೇ ಹುದ್ದೆ ಕೇಳಿ ಪಡೆದಿಲ್ಲ. ಸಿಕ್ಕ ಅವಕಾಶದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.

ಮಾಜಿ ಶಾಸಕ ಶಕುಂತಳಾ ಶೆಟ್ಟಿ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ರಹ್ಮಾನ್ ಕೋಡಿಜಾಲ್, ರಝಿಯಾ ಇಬ್ರಾಹಿಂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯೂಸುಫ್ ಬಾವ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ರೈ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖ ಚಂದ್ರಹಾಸ್, ಮುಖಂಡರಾದ ದಿನೇಶ್ ಕುಂಪಲ, ಮನ್ಸೂರ್ ಮಂಚಿಲ, ಪ್ರಕಾಶ್ ಕುಂಪಲ, ಮಹಮ್ಮದ್ ಮೋನು ಮಲಾರ್, ದೇವಕಿ ಆರ್.ಉಳ್ಳಾಲ, ದೇವಣ್ಣ ಶೆಟ್ಟಿ ಕೊಣಾಜೆ, ನಗರಸಭೆ ಅಧ್ಯಕ್ಷೆ ಶಶಿಕಲಾ ಇನ್ನಿತರರು ಉಪಸ್ಥಿತರಿದ್ದರು. ರಮೇಶ್ ಶೆಟ್ಟಿ ಬೋಳಿಯಾರ್ ಸ್ವಾಗತಿಸಿದರು. ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ.ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರಿಗೆ ಅಭಿನಂದನೆ

ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಕುಂಞಿ, ಮುಸ್ತಫಾ ಮುನ್ನೂರು, ಪಕ್ಷದ ವಿವಿಧ ಘಟಕಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶ್ರಫ್ ಕೆ.ಸಿ.ರೋಡ್, ವಿವೇಕಾನಂದ ಎಸ್.ಸನಿಲ್, ಅಶ್ರಫ್ ಉಳ್ಳಾಲ, ಅಮಿತಾ ಅಶ್ವಿನ್, ಪರ್ವೀನ್ ಸಾಜಿದ, ಶಾಲಿನಿ ಶೆಟ್ಟಿ, ತುಳಸಿ ಗಟ್ಟಿ, ಆತಿಕಾ, ಲತಾ ವಿಶ್ವನಾಥ್, ಆಯೇಷಾ, ಕೋಟೆಕಾರ್ ಪಪಂ ಸದಸ್ಯೆ ಸಫಿಯಾ, ಮ್ಯಾಥ್ಯೂಸ್ ಡಿಸೋಜ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net