ಮಾರುಕಟ್ಟೆಗೆ ಎಲೆಕ್ಟ್ರಿಕ್​ ಗೋಬೈಕ್​ ಅನಾವರಣ; 4 ಸ್ಕೂಟರ್​, 4 ಬೈಕ್​ ಪರಿಚಯ

Bike
Published on

ಬೆಂಗಳೂರು: ಕಾನ್ಫಿಡೆನ್ಸ್​ ಗ್ರೂಪ್​ ಗೋಗ್ಯಾಸ್​ ನಗರದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್​ ವಾಹನ ಗೋಬೈಕ್​ ಪರಿಚಯಿಸಿದೆ.

ಈ ಕುರಿತು ಕಾನ್ಫಿಡೆನ್ಸ್​ ಗ್ರೂಪ್​ ಚೇರ್ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಿತಿನ ಖರಾ ಮಾತನಾಡಿ, ನಾಲ್ಕು ಸ್ಕೂಟರ್​ ಹಾಗೂ ನಾಲ್ಕು ಬೈಕ್​ಗಳನ್ನು ಅನಾವರಣಗೊಳಿಸಲಾಗಿದೆ. ಪ್ರತಿ ವಾಹನವೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್​ ಮಾಡಿದರೆ 80-120 ಕಿ.ಮೀ. ಪ್ರಯಾಣಿಸಬಹುದು. 2-4 ಗಂಟೆಗಳಲ್ಲಿ ವೇಗವಾಗಿ ಚಾರ್ಜ್​ ಮಾಡಬಹುದಾಗಿದೆ ಎಂದು ತಿಳಿಸಿದರು.

ಗೋಬೈಕ್​ ವೈಶಿಷ್ಯಗಳು

ಗೋಬೈಕ್​ನ ಲೀಥಿಯಂ-ಅಯಾನ್​ ಬ್ಯಾಟರಿ 80-120 ಕಿ.ಮೀ. ಪ್ರಯಾಣ ಒದಗಿಸುತ್ತದೆ. ಆಕರ್ಷಕ ವಿನ್ಯಾಸ ಹೊಂದಿದ್ದು, ಆರಾಮದಾಯಕ ಸೀಟ್​ ಮತ್ತು ಸ್ಮಾರ್ಟ್​ ಡಿಜಿಟಲ್​ ಡಿಸ್​ಪ್ಲೇ ಹೊಂದಿದೆ. ಎಬಿಎಸ್​, ಸ್ಮಾರ್ಟ್​ ರಿವರ್ಸ್​ ಪಾರ್ಕಿಂಗ್​ ಸೆನ್ಸರ್​ ಮತ್ತು ಸಿಎನ್​ಆರ್​ ಲಾಕಿಂಗ್​ ಸಿಸ್ಟಂನಂತಹ ಆಧುನಿಕ ಭದ್ರತಾ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net