ಅಧಿಕಾರಿಗಳ ಮುಂದೆಯೇ ಫಿನೈಲ್​​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬಸ್ ಕಂಡಕ್ಟರ್​!; ಕ್ಷುಲ್ಲಕ ಕಾರಣಕ್ಕೆ ಜಗಳ..

Phenyl
Published on

ವಿಜಯನಗರ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್, ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೊಸಪೇಟೆ ವಿಭಾಗದ ಕಂಡಕ್ಟರ್ ಕುತುಬುದ್ದೀನ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕಂಡಕ್ಟರ್.

ಲಗೇಜ್ ವಿಚಾರವಾಗಿ ಕಾರ್ಗೊ ಗುತ್ತಿಗೆದಾರ ಹಾಗೂ ಕಂಡಕ್ಟರ್ ಕುತುಬುದ್ದೀನ್ ನಡುವೆ ಜಗಳ ನಡೆದಿದೆ. ಬಳ್ಳಾರಿಯಿಂದ ಪಾರ್ಸೆಲ್​ ತರುವ ವಿಷಯವಾಗಿ ಬಳ್ಳಾರಿಯ ಕಾರ್ಗೊ ಉದ್ಯೋಗಿ ಮತ್ತು ಕಂಡಕ್ಟರ್ ಮಧ್ಯೆ ವಾಗ್ವಾದ ನಡೆದಿದೆ. ಈ ಜಗಳದ ಆಡಿಯೋವನ್ನು ಕಾರ್ಗೊ ಉದ್ಯೋಗಿಗಳು ಹೊಸಪೇಟೆ ಡಿಟಿಒ ಅಧಿಕಾರಿಗೆ ಕಳುಹಿಸಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧವಾಗಿ ಅಧಿಕಾರಿಗಳು ಕುತುಬುದ್ದೀನ್​ ಅವರನ್ನು ಕರೆಸಿ ವಿಚಾರಣೆ ನಡೆಸಿದಾಗ ಅವರು ಕೂಡಲೇ ಕಿಸೆಯಿಂದ ಫಿನೈಲ್ ಬಾಟಲಿ ತೆಗೆದು ಕುಡಿದು ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಸಿಬ್ಬಂದಿ ಅವರನ್ನು ಹಿಡಿದು ಹೊಸಪೇಟೆ ಸರ್ಕಾರಿ‌ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net