

ಹುಲ್ಲಹಳ್ಳಿ: ಸಂಸದ ವಿ.ಶ್ರೀನಿವಾಸಪ್ರಸಾದ ಅವರ ನಿಧನದ ಹಿನ್ನೆಲೆಯಲ್ಲಿ ಸೋಮವಾರ ಅಭಿಮಾನಿಗಳು ಹಾಗೂ ಗ್ರಾಮದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಸಾದ್ ಅವರು ಬಡವರು, ಶೋಷಿತರು, ದಲಿತರ ಪರವಾಗಿ ಹೋರಾಟ ಮಾಡಿದ ಧೀಮಂತ ನಾಯಕ. ತಮ್ಮ ಜೀವನದಲ್ಲಿ ಅನ್ಯಾಯಗಳು ಕಂಡು ಬಂದಾಗ ತಮ್ಮ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ ಹೋರಾಟ ಮಾಡುತ್ತಿದ್ದರು. ಎಂದಿಗೂ ತತ್ವ, ಸಿದ್ಧಾಂತ ಬಿಟ್ಟುಕೊಡದ ವ್ಯಕ್ತಿತ್ವ ಅವರದು ಎಂದು ಮುಖಂಡರು ಸ್ಮರಿಸಿದರು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಪಂ ಸದಸ್ಯರಾದ ಎಚ್.ಜೆ.ಮಲ್ಲಿಕಾರ್ಜುನ, ಶಿವಣ್ಣ, ಎಚ್.ಎನ್.ಮಹೇಶ್, ಕುಮಾರ, ಮುಖಂಡರಾದ ಅಶೋಕ, ಶಿವರಾಮೇಗೌಡ, ಚಂದ್ರು ಇತರರಿದ್ದರು.