ಅಮೃತ ಮಹೋತ್ಸವ ಆಚರಣೆಗೆ ತೀರ್ಮಾನ

23SPT01
ಸೋಮವಾರಪೇಟೆ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ಶನಿವಾರ ಸಂಘದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಲಜಾ, ಲೀಲಾ, ಗಾಯತ್ರಿ, ಗೀತಾ ಇದ್ದರು.
Published on

ಸೋಮವಾರಪೇಟೆ: ಮಹಿಳಾ ಸಹಕಾರ ಸಂಘಕ್ಕೆ 75 ವರ್ಷಗಳು ತುಂಬಿರುವುದರಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲು ಶನಿವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.

ಎರಡು ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘದ ಸದಸ್ಯರು ಹೆಚ್ಚಿನ ಸಹಕಾರ ನೀಡಿದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ಅಧ್ಯಕ್ಷೆ ಸುಮಾ ಸುದೀಪ್ ಅವರು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷೆ ಜಲಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಲೀಲಾ ನಿರ್ವಾಣಿ, ಗೌರವ ಕಾರ್ಯದರ್ಶಿ ಗಾಯತ್ರಿ ನಾಗರಾಜ್, ನಿರ್ದೇಶಕರಾದ ಗೀತಾ ರಾಜು, ವಿಜಯಲಕ್ಷ್ಮೀ ಸುರೇಶ್, ಜ್ಯೋತಿ ಶುಭಾಕರ, ವರಲಕ್ಷ್ಮೀ ಸಿದ್ದೇಶ್ವರ್, ಅಮಿತಾ ಪ್ರದೀಪ್, ದಾಕ್ಷಾಯಣಮ್ಮ ಶಿವಾನಂದ ಹಾಗೂ ಶೈಲಾ ವಸಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net