ಸಂವೇದನೆ ಇಲ್ಲದ ಸರ್ಕಾರ : ಡಾ.ಸುಧಾ ಹಾಲಕಾಯಿ ಕಿಡಿ

ಕಲಬುರಗಿ : ದಸರಾ ಮೆರವಣಿಗೆಯಲ್ಲಿ  ಅಂಬಾರಿ ಹೊತ್ತು ಸಾಗುವ ಆನೆ ಅರ್ಜುನನ ಸಾವಿನ  ಸಿಎಂ ಹಾಗೂ ಸಚಿವರು ನಡೆದುಕೊಂಡ ರೀತಿ ನೋಡಿದರೆ ಸಂವೇಧನ ಇಲ್ಲದ ಸರ್ಕಾರ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ  ವೈದ್ಯಕೀಯ ಪ್ರಕೋಷ್ಠದ  ರಾಜ್ಯ ಸಂಚಾಲಕಿ ಡಾ.ಸುಧಾ ಹಾಲಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Dr.Sudha Halakai
Published on

ಕಲಬುರಗಿ : ದಸರಾ ಮೆರವಣಿಗೆಯಲ್ಲಿ  ಅಂಬಾರಿ ಹೊತ್ತು ಸಾಗುವ ಆನೆ ಅರ್ಜುನನ ಸಾವಿನ  ಸಿಎಂ ಹಾಗೂ ಸಚಿವರು ನಡೆದುಕೊಂಡ ರೀತಿ ನೋಡಿದರೆ ಸಂವೇಧನ ಇಲ್ಲದ ಸರ್ಕಾರ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ  ವೈದ್ಯಕೀಯ ಪ್ರಕೋಷ್ಠದ  ರಾಜ್ಯ ಸಂಚಾಲಕಿ ಡಾ.ಸುಧಾ ಹಾಲಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿ ಮತ್ತು ಮಾನವನ ಸಂಬಂಧದ ದೋತಕವಾಗಿದ್ದ ಅರ್ಜುನ, ನಾಡಿ ಆರಾಧ್ಯ ದೇವತೆ ಚಾಮುಂಡಿ ಹೊತ್ತು ಸಾಗಿ ನಾಡಿನ ಜನರ ಪ್ರೀತಿಗೆ ಪಾತ್ರವಾಗಿತ್ತು. ಅಂತ್ಯ ಸಂಸ್ಕಾರದಲ್ಲಿ ಅರಣ್ಯ ಸಚಿವರಾದರೂ ಹೋಗಿ ಗೌರವ ಸಲ್ಲಿಸಬೇಕಾಗಿತ್ತು.  ಅದನ್ನು ಮಾಡಲಿಲ್ಲ. ಇನ್ನೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಹಲವು  ಗೆದ್ದು. ಭಾವನಾತ್ಮಕವಾಗಿ ಸಂಬAಧ ಹೊಂದಿದ್ದರೂ ಸಿಎಂ ಸಹ ಹೋಗಲಿಲ್ಲ ಎಂದು ಖಂಡಿಸಿದ್ದಾರೆ.
ಕರುಣೆ ಇಲ್ಲದ ಕಾಂಗ್ರೆಸ್‌ನವರು ತುಷ್ಠಿಕರಣ ರಾಜಕಾರಣ ಮಾಡಲು ಮುಸ್ಲಿಮರ ಸಮಾವೇಶಕ್ಕೆ ಹೋಗಲು ಸಮಯ ಸಿಗುತ್ತದೆ. ಇಂತಹ ಕೆಲಸಕ್ಕೆ ಹೋಗಲು ಸಮಯ ಇಲ್ಲ ಎನ್ನುವ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ, ಹಿಂದು ವಿರೋಧಿ ಸರ್ಕಾರ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net