ದೊಡ್ಡೂರ ಕ್ಲಸ್ಟರ್​ಗೆ ಕಂಪ್ಯೂಟರ್ ದೇಣಿಗೆ

2 lxr 3- computer
Published on

ಲಕ್ಷ್ಮೇಶ್ವರ: ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಎಂಜಿಎಂ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಬಸವೇಶ್ವರ ಮಹಾಂತಶೆಟ್ಟರ ಹೇಳಿದರು.

ಎಂಜಿಎಂ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ದೊಡ್ಡೂರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ದೊಡ್ಡರು ಕ್ಲಸ್ಟರ್​ಗೆ ಒಂದು ಕಂಪ್ಯೂಟರ್ ಅನ್ನು ದೇಣಿಗೆಯಾಗಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಕ್ಲಸ್ಟರ್ ಸಿಆರ್​ಪಿ ಶಿವಾನಂದ ಅಸುಂಡಿ ಕಂಪ್ಯೂಟರ್ ಸ್ವೀಕರಿಸಿ ಅಭಿನಂದಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ , ನಿವೃತ್ತ ಶಿಕ್ಷಕ ರಮೇಶ ನವಲೆ, ಚಂದ್ರು ನೇಕಾರ, ಬಸವರಾಜ ಯತ್ನಳ್ಳಿ, ಡಿ.ಡಿ. ಲಮಾಣಿ, ಗೀತಾ ಹಳ್ಯಾಳ, ಎಂ.ಎಸ್. ಹಿರೇಮಠ, ಜಿ.ಎಚ್ ರಾಜೂರ, ಕವಿತಾ ಹಳ್ಯಾಳ, ಎಂ.ಎ. ನದಾಫ್, ಸತೀಶ ಬೋಮಲೆ, ಎಸ್.ವಿ. ಲಕ್ಷ್ಮೇಶ್ವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net