ಶಾಲೆಗಳಲ್ಲಿ ಕಡ್ಡಾಯ ಕರಾಟೆ ಶಿಕ್ಷಣ: ತುಂಗಪ್ಪ ಬಂಗೇರ ಸಲಹೆ

Bel_Karate
Published on

ಬೆಳ್ತಂಗಡಿ: ಪುಂಜಾಲಕಟ್ಟೆ ಬಂಗ್ಲ ಮೈದಾನದಲ್ಲಿ ಯಮತೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಬೆಳ್ತಂಗಡಿ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.

ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಶುಭ ಹಾರೈಸಿದರು. ಗೌರವಾಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿ, ಪ್ರತಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಅವಶ್ಯಕವಾಗಿ ಕಲಿಯಲು ಸರ್ಕಾರ ಅನುವು ಮಾಡಿಕೊಡಬೇಕು ಎಂದರು.

ಕರಾಟೆ ಮುಖ್ಯಶಿಕ್ಷಕರಾದ ಶಾಜು, ಮಲವಾನ, ರಾಜ್ಯ ಮುಖ್ಯಶಿಕ್ಷಕ ನಾರಾಯಣ ಕೆ.ಪೂಜಾರ್ ಹಾವೇರಿ, ರೋಟರಿಯ ರಾಘವೇಂದ್ರ ಭಟ್, ಶಿವಪ್ರಸನ್ನ ಆಚಾರ್ಯ, ಶಿವಪ್ರಸಾದ್ ರೈ, ಉದ್ಯಮಿ ಸುಧಾಕರ್ ಆಚಾರ್ಯ ಹಾಗೂ ವಿಜಯ ಫರ್ನಾಂಡಿಸ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮನೋಹರ್ ಬಳಂಜ, ಸೇಕ್ ಝಕೀರ್ ಹುಸೇನ್, ಉದಯಕುಮಾರ್, ಪ್ರವೀಣ್ ಕುಮಾರ್ ಕುಡುಮೆ, ಪುಷ್ಪಲತಾ ಮೋಹನ್, ಜೆರಾಲ್ಡ್ ಫನಾರ್ಂಡಿಸ್, ಪ್ರಕಾಶ್ ಪೂಜಾರಿ ಹಾಗೂ ಜೋಕಿಂ ಪಿಂಟೋ ಉಪಸ್ಥಿತರಿದ್ದರು.

ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಸಂಸ್ಥೆಯ ಮತ್ತು ಜಿಲ್ಲೆಗೆ ಕೀರ್ತಿ ತಂದಿರುವ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮನಿಷಾ ಎಂ.ಕಬೂರ್ ನಿರೂಪಿಸಿದರು. ಸೆನ್ಸಾಯ್ ಅಶೋಕಾಚಾರ್ಯ, ಕೋಚ್ ಮಿಥುನ್‌ರಾಜ್, ಸಿಂಚನಾ ಎಂ.ಡಿ, ಶ್ರವಣ್ ಎಸ್, ಅನಂತ್ ಫ್ರಾನ್ಸಿಸ್ ಸಾಬು, ಶೇಕ್ ಕಲ್ಫಾನ್ ಹುಸೇನ್, ಪ್ರಜ್ವಲ್ ಆಚಾರ್ಯ, ಜಿತೇಶ್, ಸುಕೇಶ್ ಪೂಜಾರಿ ಪಂದ್ಯಾಟದ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net