ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ
Published on

ಹಾಸನ: ಪ್ರೌಢಶಾಲಾ ವಿದ್ಯಾರ್ಥಿಗಳ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲಾ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

3000 ಮೀ. ಓಟದಲ್ಲಿ ಶಾಲೆಯ ನಂದಿನಿ ದ್ವೀತಿಯ, ಉದ್ದ ಜಿಗಿತ ತನುಶ್ರೀ ದ್ವೀತಿಯ, ವಾಣಿಶ್ರೀ ತೃತೀಯ, ಎತ್ತರ ಜಿಗಿತ ಮಾನಸಾ ತೃತೀಯ, ತ್ರಿವಿಧ ಜಿಗಿತದಲ್ಲಿ ವಾಣಿಶ್ರೀ ಪ್ರಥಮ, ತನುಶ್ರೀ ದ್ವಿತೀಯ, ಭರ್ಜಿ ಎಸೆತದಲ್ಲಿ ಮಾನಸಾ ದ್ವಿತೀಯ, ಚೈತ್ರಾ ತೃತೀಯ,

4100 ಮೀ. ರಿಲೆ ಓಟದಲ್ಲಿ ಶಶಿಕಲಾ, ಗಾನವಿ, ಮಾನ್ವಿ, ಮಾನಸಾ ತಂಡ ದ್ವಿತೀಯ, 4400 ಮೀ. ರಿಲೆ ಓಟದಲ್ಲಿ ಶಶಿಕಲಾ, ಗಾನವಿ, ಮಾನ್ವಿ, ರಮ್ಯಾ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ 2ನೇ ಸಮಗ್ರ ಪ್ರಶಸ್ತಿ ಪಡೆದ ಶಾಲೆಯಾಗಿ ಹೊರಹೊಮ್ಮಿದೆ.

400, 800 ಮೀ. ಓಟದಲ್ಲಿ ಧನುಷ್ ತೃತೀಯ, 3000 ಮೀ. ಓಟದಲ್ಲಿ ಪವನ್ ಪ್ರಥಮ, ನವೀನ್ ತೃತಿಯ, ತ್ರಿವಿಧ ಜಿಗಿತದಲ್ಲಿ ಪವನ್ ತೃತೀಯ, ಗುಂಡು ಎಸೆತ ಗಗನ್ ಪ್ರಥಮ, ಭರ್ಜಿ ಎಸೆತದಲ್ಲಿ ದೀಕ್ಷಿತ್ ಪ್ರಥಮ, ಅಶೋಕ್ ದ್ವೀತಿಯ, ಉದ್ದ ಜಿಗಿತದಲ್ಲಿ ದೀಕ್ಷಿತ್ ದ್ವಿತೀಯ, ಎತ್ತರ ಜಿಗಿತದಲ್ಲಿ ದೀಕ್ಷಿತ್ ಪ್ರಥಮ, ಹ್ಯಾಮರ್ ಎಸೆತದಲ್ಲಿ ಗುಣಶೇಖರ್ ತೃತೀಯ, 4100 ಮೀ. ರಿಲೆ ಓಟದಲ್ಲಿ ದೀಕ್ಷಿತ್, ಪವನ್, ಗಗನ್, ಅಶೋಕ್ ತಂಡ ಪ್ರಥಮ, 4400 ಮೀ. ರಿಲೆ ಓಟದಲ್ಲಿ ಗಗನ್, ಧನುಷ್, ಯುವರಾಜ್, ಪವನ್ ತಂಡ ತೃತೀಯ ಸ್ಥಾನ ಪಡೆದ್ದಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ. ರಘು ತರಬೇತಿ ನೀಡಿದ್ದಾರೆ. ಮುಖ್ಯ ಶಿಕ್ಷಕರಾದ ಎ.ಎಸ್. ಉಮಾಮಣಿ, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net