

ಕಂಪ್ಲಿ: ಸ್ಥಳೀಯ ಪೊಲೀಸರು, ಐಟಿಬಿಪಿ ಪ್ಯಾರಾ ಮಿಲಿಟರಿ ಪಡೆ ಸೇರಿ ಗುರುವಾರ ಸಂಜೆ ಪಥ ಸಂಚಲನ ನಡೆಸಿದವು.
ಮುಕ್ತ, ಪಾರದರ್ಶಕ ಹಾಗೂ ಆಮಿಷ ರಹಿತ ವಿಧಾನಸಭಾ ಚುನಾವಣೆ ನಡೆಸಲು ಜನತೆಯಲ್ಲಿ ಜಾಗೃತಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾಡಳಿತಗಳು ಕಾರ್ಯೋನ್ಮುಖವಾಗಿದ್ದು, ಇದರ ಭಾಗವಾಗಿ ಈ ಪಥಸಂಚನ ನಡೆದಿವೆ.
ಕೋಟೆಯಿಂದ ಆರಂಭಗೊಂಡ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಐಟಿಬಿಪಿ ಪ್ಯಾರಾ ಮಿಲಿಟರಿ ಪಡೆ ಮುಖ್ಯಸ್ಥ ಅಸಿಸ್ಟೆಂಟ್ ಕಮಾಂಡರ್ ಗಜೇಂದ್ರಪಾಲ್‌ಸಿಂಗ್, ಆರ್‌ಪಿಐ ಅಮೋಘ್, ಆರ್‌ಎಸ್‌ಐ ಬಾಹುಬಲಿ ಸೇರಿ 65 ಸ್ಥಳೀಯ ಪೊಲೀಸರು, 30 ಶಸ್ತ್ರಾಸ್ತ್ರ ಸಹಿತ ಪೇದೆಗಳು ಪಾಲ್ಗೊಂಡಿದ್ದರು.
ಕಂಪ್ಲಿ ಪಿಐ ಸುರೇಶ್ ಎಚ್.ತಳವಾರ್, ಕುರುಗೋಡ್ ಸಿಪಿಐ ಜಯಪ್ರಕಾಶ್, ಪಿಎಸ್‌ಐಗಳಾದ ಶಾರದಮ್ಮ ಡಿ.ದೊಡ್ಡಾಣಿ, ವಿಜಯಪ್ರತಾಪ್ ಮತ್ತಿತರ ಪ್ರಮುಖರು ಇದ್ದರು.