

ಕಂಪ್ಲಿ: ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಪೌರಸೇವಾ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಮಾತನಾಡಿ, ಕಂಪ್ಲಿಯಲ್ಲಿ ನೂತನ ಬಿಇಒ ಕಚೇರಿ ಆರಂಭಕ್ಕೆ ಕಲಬುರಗಿಯ ಶಿಕ್ಷಣ ಇಲಾಖೆ ಅಪರ ಆಯುಕ್ತರು ಪ್ರಕ್ರಿಯೆ ಆರಂಭಿಸಿದ್ದಾರೆ. ಕಚೇರಿ ಆರಂಭಕ್ಕೆ ಸಮಿತಿ ನೇಮಕ ರಚಿಸಲಾಗಿದೆ.
ಆದರೆ, ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕುರುಗೋಡಿನ ಬಿಇಒ ಕಚೇರಿಗೆ ಕಂಪ್ಲಿ ತಾಲೂಕು ಆಡಳಿತ ಒಳಪಡಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ಮುನ್ನ ಹೊಸಪೇಟೆಗೆ ಶಿಕ್ಷಕರು ತಿರುಗಿ ಬೇಸತ್ತಿದ್ದರು. ಈಗ ಕುರುಗೋಡಿಗೆ ತಿರುಗುವಂತೆ ಆಗಿದ್ದು, ಶಿಕ್ಷಕರ ಸಮಯ, ಹಣ ವ್ಯರ್ಥವಾಗುತ್ತಿದೆ.
ಕಂಪ್ಲಿ ತಾಲೂಕು ದಿನೇದಿನೆ ಬೆಳೆಯುತ್ತಿದ್ದು ಕ್ರಮೇಣ ಶಾಲೆಗಳ ಸಂಖ್ಯೆಯೂ ಹೆಚ್ಚಳವಾಗುತ್ತಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರ ಅನುಕೂಲಕ್ಕಾಗಿ ಕಂಪ್ಲಿಯಲ್ಲಿ ಬಿಇಒ ಕಚೇರಿಯನ್ನು ಆರಂಭಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಎ.ಗುರುಮೂರ್ತಿ, ಟಿ.ಶಶಿಧರ, ಬಿ.ವೀರೇಶಪ್ಪ, ಬಿ.ವೀರಣ್ಣ, ಪಿ.ಸೋಮಪ್ಪ, ವಿ.ಪಕ್ಕೀರಪ್ಪ, ಅಮರೇಶ್ವರ, ಬಿ.ಚಂದ್ರಪ್ಪ, ಟಿ.ಎಂ.ಬಸವರಾಜ, ಸುಜಾತ ಇತರರಿದ್ದರು.