

ಮೂಲ್ಕಿ: ಸಂಸ್ಕೃತಿ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ನಾಯಕತ್ವ ಗುಣಗಳಿಂದ ಕೂಡಿದ ಸಹಕಾರಿ ಜೀವನ ಹಾಗೂ ಪ್ರಾಪಂಚಿಕ ಜ್ಞಾನ ಸಂಪನ್ನರಾದರೆ ಶೈಕ್ಷಣಿಕ ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಶಿಕ್ಷಣದ ಜತೆಯಲ್ಲಿ ಪ್ರಾಪಂಚಿಕ ಜ್ಞಾನ ಸಂಪನ್ನತೆಯನ್ನು ಗಳಿಸಲು ಪ್ರತಿಭಾ ಸ್ಪರ್ಧೆ ಪೂರಕ ಎಂದು ವಿಜಯ ಕಾಲೇಜಿನ ಹಳೆ ವಿದ್ಯಾರ್ಥಿ ಶೋಧನ್ ಶೆಟ್ಟಿ ಹೇಳಿದರು.
ವಿಜಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಂತರ್ ಕಾಲೇಜು ಪದವಿಪೂರ್ವ ಮಟ್ಟದ ಪ್ರತಿಭಾ ಸ್ಪರ್ಧೆ ‘ವಿಜಯೋತ್ಸವ-ವಿವಂತ-2024’ ಸವಾರೋಪದಲ್ಲಿ ಅವರು ವಾತನಾಡಿದರು.
ಮಂಗಳೂರು ವಿಶ್ವ ವಿದ್ಯಾಲಯದ ಅಂತಿಮ ಬಿಸಿಎ ಪರೀಕ್ಷೆಯಲ್ಲಿ 9ನೇ ರ‌್ಯಾಂಕ್ ಗಳಿಸಿದ ವಿಜಯಾ ಕಾಲೇಜು ವಿದ್ಯಾರ್ಥಿ ಮನೀಶ್ ಮತ್ತು ಬಿಸಿಎ 6ನೇ ಸೆಮಿಸ್ಟ್ಟರ್ ಪರೀಕ್ಷೆಯ ಎಲ್ಲ ವಿಭಾಗಗಳಲ್ಲ್ಲಿ ಶೇ100 ಫಲಿತಾಂಶ ಪಡೆದ ವಿಜಯಾ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಸ್. ಭಟ್ ಅವರನ್ನು ಸನ್ಮಾನಿಸಲಾಯಿತು.
ವಿಜಯ ಪದವಿ ಕಾಲೇಜು ಪ್ರಾಂಶುಪಾಲ ಪ್ರ್ರೊ.ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ವೈ.ವಿ., ಐಕ್ಯುಎಸಿ ಸಂಯೋಜಕ ಪ್ರ್ರೊ.ದೇವದಾಸ್ ಕೆ. ಅತಿಥಿಗಳಾಗಿದ್ದರು.
ಪ್ರೊ.ದೇವದಾಸ್ ಕೆ ಸ್ವಾಗತಿಸಿದರು. ರೋಷ್ನಿ ಪ್ರಾರ್ಥಿಸಿದರು. ಹರ್ಷಿತಾ ರಾವ್ ಶೈಕ್ಷಣಿಕ ಸಾಧಕರನ್ನು ಪರಿಚಯಿಸಿದರು. ಬಿ.ಶ್ರೀರಕ್ಷಾ ಭಟ್ ಅತಿಥಿಗಳನ್ನು ಪರಿಚಯಿಸಿದರು. ರಾಜೇಶ್ ಶೆಟ್ಟಿಗಾರ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ವೀಕ್ಷಾ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕಿ, ಕಾಲೇಜು ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್ ವಂದಿಸಿದರು.
ಮೆಡಲಿನ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಟ್ರಿವಿಯಾ: ಪ್ರಥಮ - ಮೆಡಲಿನ್ ಕಾಲೇಜು, ದ್ವಿತೀಯ - ವಿಜಯ ಕಾಲೇಜು, ಟೆಕ್ನೋವೇಶನ್:ಪ್ರಥಮ - ವಿಜಯ ಕಾಲೇಜು, ದ್ವಿತೀಯ - ಮೂಲ್ಕಿ ಸರಕಾರಿ ಪಿ.ಯು. ಕಾಲೇಜು, ಕೋಡ್ ಕ್ರುಸೇಡ್: ಪ್ರಥಮ - ಪಾಂಪೈ ಪಿ.ಯು. ಕಾಲೇಜು ಐಕಳ, ದ್ವಿತೀಯ - ವಿಜಯ ಪಿ.ಯು. ಕಾಲೇಜು, ಗೇಮರ್ಸ್ ಗಾನ್ಟ್ಲೆಟ್: ಪ್ರಥಮ - ವಿಜಯ ಪಿ.ಯು. ಕಾಲೇಜು, ದ್ವಿತೀಯ: ಮೂಲ್ಕಿ ಸರಕಾರಿ ಪಿ.ಯು. ಕಾಲೇಜು, ವಾರ್ಕೆಟ್ ವಾರ್ವೆಲ್: ಪ್ರಥಮ - ಮೂಡುಬಿದಿರೆ ಶ್ರೀ ಮಹಾವೀರ ಪಿ.ಯು. ಕಾಲೇಜು, ದ್ವಿತೀಯ - ವಿಜಯ ಪಿ.ಯು. ಕಾಲೇಜು, ಹೋರಝಾನ್: ಪ್ರಥಮ - ಮೆಡಲಿನ್ ಕಾಲೇಜು, ದ್ವಿತೀಯ - ವಿಜಯ ಕಾಲೇಜು, ಕ್ವಿಜ್‌ಓಮೇನಿಯಾ: ಪ್ರಥಮ - ಕಟೀಲು ಕಾಲೇಜು, ದ್ವಿತೀಯ - ಮೂಲ್ಕಿ ಶ್ರೀನಾರಾಯಣಗುರು ಪದವಿಪೂರ್ವ ಕಾಲೇಜು, ಫಿಶಿಯೋನಿಕ್ಸ್: ಪ್ರಥಮ - ವಿಜಯ ಕಾಲೇಜು, ದ್ವಿತೀಯ: ಕಟೀಲು ಕಾಲೇಜು, ಕೆಮಿಸ್ಟ್ರಿ: ಪ್ರಥಮ - ಮೂಲ್ಕಿ ಶ್ರೀನಾರಾಯಣಗುರು ಕಾಲೇಜು, ದ್ವಿತೀಯ - ಕಟೀಲು ಕಾಲೇಜು, ನ್ಯೂಮರಿಟೋಸ್: ಪ್ರಥಮ - ವಿಜಯ ಕಾಲೇಜು, ದ್ವಿತೀಯ - ಮೂಡುಬಿದಿರೆ ಮಹಾವೀರ ಕಾಲೇಜು, ಅಭಿವ್ಯಕ್ತಿ: ಪ್ರಥಮ - ಕಟೀಲು ಕಾಲೇಜು, ದ್ವಿತೀಯ - ಮೂಲ್ಕಿ ಕಾಲೇಜು, ಸಿನೆವಾಟೋಗ್ರಫಿ: ಪ್ರಥಮ - ಮೆಡಲಿನ್ ಕಾಲೇಜು, ದ್ವಿತೀಯ - ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜು, ಸಮಗ್ರ ಪ್ರಶಸ್ತಿ: ಪ್ರಥಮ - ಮೆಡಲಿನ್ ಪದವಿಪೂರ್ವ ಕಾಲೇಜು ಮೂಲ್ಕಿ, ದ್ವಿತೀಯ- ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಪಡೆಯಿತು.