ಕಿನ್ನಿಗೋಳಿ: ಬಾಬಕೋಡಿ ಪುನರೂರು ಶ್ರೀ ಆದಿಶಕ್ತಿ ನಾಗಕನ್ನಿಕಾ ಕ್ಷೇತ್ರದಲ್ಲಿ ದೀಪೋತ್ಸವ ನಡೆಯಿತು. ಗೋಳಿಜೋರ ಶ್ರೀರಾಮ ಭಜನಾ ಮಂದಿರದ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಇತ್ತೀಚೆಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್ ಕಿನ್ನಿಗೋಳಿ ಅವರನ್ನು ಸನ್ಮಾನಿಸಲಾಯಿತು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಕ್ಷೇತ್ರದ ಧರ್ಮದರ್ಶಿ ವಸಂತಿ ಸೇಸಪ್ಪ ಮಡಿವಾಳ, ಸೇಸಪ್ಪ ಮಡಿವಾಳ, ಶ್ರೀಧರ ಮಡಿವಾಳ, ಸಂತೋಷ್ ಶೆಟ್ಟಿ ಪುನರೂರು, ಗೋಪಾಲ ಕುಲಾಲ್, ಗಣೇಶ್ ಕುಮಾರ್, ನಾಗರಾಜ್ ಮಂಗಳೂರು, ಆಶಾ ನಾಗರಾಜ್, ಗಣೇಶ್ ಕುಮಾರ್ ಎಡಪದವು, ಜಯಂತ್ ವಿಟ್ಲ, ಕಬೀರ್ ಕೃಷ್ಣಾಪುರ, ಗಾಯತ್ರಿ ಕದ್ರಿ, ವೇದ ಕದ್ರಿ, ಭಕ್ತರು ಉಪಸ್ಥಿತರಿದ್ದರು.