ನ.20ರಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಬಾಲಾಲಯ ಪ್ರತಿಷ್ಠೆ

mng--17 Nov Kavoor-Mahalingeshwara
Published on

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ನ.20ರಂದು ನಡೆಯಲಿದೆ.

ನ.18ರಂದು ಸಂಜೆ 6ಗಂಟೆಯಿಂದ ದೇವತಾ ಪ್ರಾರ್ಥನೆ, ಪ್ರಸಾದ ಶುದ್ಧಿ, ರಕ್ತೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಾಲಲಿಂಗ ಜಲಾಧಿವಾಸ. ನ.19ರಂದು ಪ್ರಾತಃಕಾಲ 7ಗಂಟೆಯಿಂದ ಗಣಪತಿ ಹೋಮ, ಕ್ಷಾಳನಾದಿ ಬಿಂಬಶುದ್ಧಿ, ಶ್ರೀ ದೇವರಿಗೆ 49 ಕಲಶ ಪ್ರಧಾನಹೋಮ, ಆನುಜ್ಞಾ ಕಲಶಾಭಿಷೇಕ, ಅನುಜ್ಞಾ ಬಲಿ, ಅನುಜ್ಞಾ ಪ್ರಾರ್ಥನೆ, ಶಯ್ಯಪೂಜೆ, ನಿದ್ರಾಕುಂಭ ಪೂಜೆ. ಸಂಜೆ 6 ಗಂಟೆಯಿಂದ ಬಾಲಲಿಂಗ ಬಿಂಬ ಶುದ್ಧಿ ಪ್ರಕ್ರಿಯೆ, ದ್ಯಾನಾಧಿವಾಸ, ಶಿರಸ್ತತ್ವ ಹೋಮ, ಆಧಿವಾಸ ಹೋಮ.

ನ.20ರಂದು ಪ್ರಾತಃಕಾಲ 7 ಗಂಟೆಯಿಂದ ಸಂಹಾರತತ್ವ ಹೋಮ, ಸಂಹಾರತತ್ವ ಕಲಶ, ಕಲಾಶಾಭಿಷೇಕ ಸಂಕೋಚ ಪ್ರಕ್ರಿಯೆ, ಜೀವಕಲಶ ಪೂಜೆ, ಜೀವೋದ್ವಾಸನೆ. 11.30ಕ್ಕೆ ಮಕರಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net