ಚಿಂತಾಮಣಿ: ಸತ್ತ ಹಂದಿಗಳನ್ನು ಪಶು ವೈದ್ಯಾಧಿಕಾರಿಗಳ ಸೂಚನೆಯನ್ನೂ ಮೀರಿ ಕೆರೆಗೆ ಹಾಕಿದ್ದ ಹಂದಿ ಸಾಕಿದ್ದ ಾಮ್ರ್ ಮಾಲೀಕ ವೆಂಕಟರೆಡ್ಡಿ ಮೇಲೆ ಐಮರೆಡ್ಡಿಹಳ್ಳಿ ಪಶು ಚಿಕಿತ್ಸಾಲಯದಲ್ಲಿ ವೈದ್ಯ ಡಾ.ಆಶಾ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂದಿ ಜ್ವರದಿಂದ ಸತ್ತ ಹಂದಿಗಳನ್ನು 6 ಅಡಿ ಆಳದ ಗುಂಡಿ ತೋಡಿ ಮುಚ್ಚಿ, ಸುಣ್ಣ ಮತ್ತು ಬ್ಲೀಚಿಂಗ್ ಪೌಡರನ್ನು ಸಿಂಪಡಿಸಲು ತಿಳಿಸಲಾಗಿತ್ತು. ಆದರೆ, ಸತ್ತ ಮುರ್ನಾಲ್ಕು ಹಂದಿಗಳನ್ನು ಹೆಬ್ಬರಿ ಗ್ರಾಮದ ಕೆರೆಯಲ್ಲಿ ಹಾಕಿ ಸಾಂಕ್ರಾಮಿಕ ಹರಡಲು ಕಾರಣರಾದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.