ಪಡಿತರ ಅಕ್ಕಿ ಅಕ್ರಮ ಸಾಗಾಟ ದೂರು

21bkl3 Akki sagata
Published on

ಭಟ್ಕಳ: ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಆರೋಪಿ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭಟ್ಕಳ ತಾಲೂಕಿನ ಪುರವರ್ಗದ ಗಣೇಶ ನಗರ ನಿವಾಸಿ ನಜೀರ ಅಹ್ಮದ್ ಯೂಸುಫ್ ಶೇಖ ಆರೋಪಿ. ಗುಜರಿ ವ್ಯಾಪಾರಿಯಾಗಿರುವ ಇವರು ಪಡಿತರ ಅಕ್ಕಿ ಇರುವ ಮೂಟೆಗಳನ್ನು ಓಮಿನಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಭಟ್ಕಳ ಅರ್ಬನ್ ಬ್ಯಾಂಕ್ ಎದುರುಗಡೆ ಹೂವಿನ ಚೌಕದ ಕಡೆ ಹೋಗುತ್ತಿದ್ದ ಓಮಿನಿ ವಾಹನವನ್ನು ತಡೆದು ಪರಿಶೀಲಿಸಲಾಗಿತ್ತು. ವಾಹನದಲ್ಲಿ 520 ಕೆ.ಜಿ. ತೂಕದ ಅಕ್ಕಿ ಇರುವ 15 ಮೂಟೆಗಳು ಪತ್ತೆಯಾಗಿವೆ. ಈ ಕುರಿತು ಆಹಾರ ನಿರೀಕ್ಷಕ ಶಶಿಧರ ಭೀಮಣ್ಣ ಹೊನ್ನಳ್ಳಿ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net