

ಮೇಲುಕೋಟೆ: ಮೇಲುಕೋಟೆಯ ಭಗವದ್ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ವತಿಯಿಂದ ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ ತಿಳಿಸಿದರು.
ಮೇಲುಕೋಟೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿ, ಸಂಸ್ಕೃತ ಸ್ಪರ್ಧೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಬೇಕು. ಬಹುಮಾನ ಒಂದು ಸಾಂಕೇತಿಕ ಮಾನದಂಡವಷ್ಟೆ. ಉತ್ಸಾಹ, ನಿರ್ಭಯದಿಂದ ಸ್ಪರ್ಧಿಸುವುದೇ ವಿದ್ಯಾರ್ಥಿಗಳ ಗುರಿಯಾಗಿರಬೇಕು. ಆಗ ಮಾತ್ರ ಸಂಸ್ಕೃತ ಭಾಷೆಯ ಕಲಿಕೆಯಲ್ಲಿ ಪ್ರಾವೀಣ್ಯತೆ ಪಡೆಯಲು ಸಾಧ್ಯ ಎಂದರು.
ಸಮಾರಂಭದಲ್ಲಿ ಶ್ರೀ ಸೂಕ್ತ ಮತ್ತು ಪುರುಷ ಸೂಕ್ತ, ಸೇತುಬಂಧದ ಆಂಗ್ಲಾನುವಾದ ಹಾಗೂ ಪಾಣಿನೀಯ ಅಷ್ಟಾಧ್ಯಾಯಿ ಸಂಪುಟ-3 ಮೂಲಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು.
2023-24ನೇ ಸಾಲಿನಲ್ಲಿ ಸಂಸ್ಥೆಯಿಂದ ನೀಡುವ ಜ್ಞಾನನಿಧಿ ಪುರಸ್ಕಾರವನ್ನು ವಿದ್ವಾನ್ ಎನ್.ಶ್ರೀನಿವಾಸನ್, ಉ.ವೇ.ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್ ಅವರಿಗೆ ಕೈಂಕರ್ಯ ನಿಧಿ ಪುರಸ್ಕಾರ, ದೇವಸ್ಥಾನದ ಜೋಯಿಸರಾದ ಎಚ್.ಅನಂತಪದ್ಮನಾಭ ಅವರಿಗೆ ಸೇವಾನಿಧಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಕುಲಸಚಿವ ವಿದ್ವಾನ್ ಎಸ್.ಕುಮಾರ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ವಿಜೇತರಾದರು: ಕಂಠಪಾಠ ಸ್ಪರ್ಧೆ: ಪ್ರಥಮ ಬಹುಮಾನ-ವೈನವಿ, ವಿಶ್ವಮಾನವ ವೇದ ಸಂಸ್ಕೃತ ಪಾಠಶಾಲೆ, ಮೈಸೂರು, ದ್ವಿತೀಯ ಬಹುಮಾನ-ಚಿರಂಜೀವಿ, ಶ್ರೀಕಾಲಭೈರವೇಶ್ವರ ಸಂಸ್ಕೃತ, ವೇದಾಗಮ ಮಹಾವಿದ್ಯಾಲಯ, ಆದಿಚುಂಚನಗಿರಿ. ತೃತೀಯ ಬಹುಮಾನ- ರಿಷಿ ಎಂ. ವಿಶ್ವಮಾನವ ವಿದ್ಯಾನಿಕೇತನ, ಸಂಸ್ಕೃತ ಪಾಠಶಾಲೆ, ಮೈಸೂರು.
ಭಾಷಣ ಸ್ಪರ್ಧೆ: ಪ್ರಥಮ ಬಹುಮಾನ - ಹರ್ಷಪ್ರಸಾದ, ಶ್ರೀಮಾತಾ ಸಂಸ್ಕೃತ ಪಾಠಶಾಲೆ, ಉಮ್ಮಚಗಿ, ದ್ವಿತೀಯ ಬಹುಮಾನ ರಾಜೇಶ ದತ್ತಾತ್ರೇಯ ಹೆಗಡೆ, ಶ್ರೀರಾಘವೇಂದ್ರ ಭಾರತಿ ಸವೇದ ಸಂಸ್ಕೃತ ಪಾಠಶಾಲೆ, ಹೊನ್ನಾವರ, ತೃತೀಯ ಬಹುಮಾನ-ಸೋಮಶೇಖರ್ ಆರ್. ಕಾಲಭೈರವೇಶ್ವರ ಸಂಸ್ಕೃತ ವೇದಾಗಮ, ಮಹಾವಿದ್ಯಾಲಯ, ಶ್ರೀಆದಿಚುಂಚನಗಿರಿ.
ಲೇಖನ ಸ್ಪರ್ಧೆ: ಪ್ರಥಮ ಬಹುಮಾನ-ಇಂಚರಾ ಹೆಗಡೆ, ಭಾರತಿ ಸಂಸ್ಕೃತ ಪಾಠಶಾಲೆ, ಬೈರುಂಬೆ, ದ್ವಿತೀಯ ಬಹುಮಾನ -ಪ್ರಜ್ವಲ್, ಶ್ರೀಯದುಶೈಲ ಪ್ರೌಢಶಾಲೆ, ಮೇಲುಕೋಟೆ. ತೃತೀಯ ಬಹುಮಾನ - ಗುರುಸಂಗಾರ್ಯ ಬಿ.ಕೆ., ಶ್ರೀಸಿದ್ದಲಿಂಗೇಶ್ವರ ವೇದ ಸಂಸ್ಕೃತ ಕಾಲೇಜು, ಶ್ರೀಸಿದ್ಧಗಂಗಾ ಮಠ, ಸಮಾಧಾನಕರ ಬಹುಮಾನ-ಯಶ್ವಂತ್, ಪರದೇಶಿ ಕೇಂದ್ರ ವಿದ್ಯಾಪೀಠ ಸಂಸ್ಕೃತ ಕಾಲೇಜು, ರಂಗಾಪುರ, ತಿಪಟೂರು ತಾಲೂಕು.