ಸಾಮರ್ಥ್ಯಗಳೇ ನಿಮ್ಮ ಯಶಸ್ಸಿನ ಮೂಲ ಸೂತ್ರ

gan (12)
Published on

ಕುಂದಾಪುರ: ಮಾರ್ಗದರ್ಶನ, ಭರವಸೆ, ಸಾಮರ್ಥ್ಯಗಳೇ ನಿಮ್ಮ ಯಶಸ್ಸಿನ ಮೂಲಸೂತ್ರಗಳು. ಗುರಿಯ ಆಯ್ಕೆಯಲ್ಲಿ ಯಾವತ್ತೂ ತಪ್ಪಬಾರದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ನಿರ್ಧಾರ ಬದಲಾಗಬಾರದು. ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಆಳಾಗಿ ಬದುಕುವುದಕ್ಕಿಂತ ಅರಸನಾಗಲು ಪ್ರಯತ್ನಿಸಬೇಕು ಎಂದು ವ್ಯಕ್ತಿತ್ವ ವಿಕಸನದ ತರಬೇತುದಾರ ವಿ.ವಾಮನ ಕುವಾರ್ ಕೇರಳ ಹೇಳಿದರು.

ಕುಂದಾಪುರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರ ನಡೆದ ಪರಿವರ್ತನ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಪ್ರಾಂಶುಪಾಲ ಶರಣಕುವಾರ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ನಾವಡ, ಕಾರ್ಯದರ್ಶಿ ಸುಧಾಕರ ಶೆಟ್ಟಿ, ಖಜಾಂಚಿ ಕೃಷ್ಣಮೂರ್ತಿ ಶೇಟ್, ಭೀವಾ ವಾಮನ ಕುವಾರ್, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಸದಾರಾಮ್, ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೇಯಾ ಸ್ವಾಗತಿಸಿದರು. ಹಿತಾಶ್ರೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net