ಶಿವಪುರ ಶಾಲೆಗೆ ಪೀಠೋಪಕರಣ ಹಸ್ತಾಂತರ

hbr (6)
Published on

ಹೆಬ್ರಿ: ಶಿವಪುರ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಇನ್ಟ್ರಾಮೆಟಿಕಾ ಬಿಸಿನೆಸ್ ಸೆಲ್ಯೂಷನ್ ಪ್ರೈ.ಲಿ. ಕೊಡಮಾಡಿದ ಪೀಠೋಪಕರಣ, ಕ್ರೀಡಾ ಸಾಮಗ್ರಿಗಳ ಹಸ್ತಾಂತರ, ಅಭಿನಂದನಾ ಕಾರ್ಯಕ್ರಮ ಶನಿವಾರ ನಡೆಯಿತು. ಸಂಸ್ಥೆಯ ಸೀನಿಯರ್ ಡೈರೆಕ್ಟರ್ ಸುರೇಂದ್ರನಾಥ್ ಸಿಂಗ್ ಪೀಠೋಪಕರಣವನ್ನು ಮುಖ್ಯಶಿಕ್ಷಕಿ ಶರ್ಮಿಳಾ ಅವರಿಗೆ ಹಸ್ತಾಂತರಿಸಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಯಶೋದಾ, ಪ್ರಮುಖರಾದ ಬಾಲಕೃಷ್ಣ ಪೂಜಾರಿ ಕನ್ಯಾನ, ಶಿವಪುರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲಾಯ, ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ರಮೇಶ್ ಕುವಾರ್, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಸುಮಿತ್ ಹೆಗ್ಡೆ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net