ಪೌಷ್ಠಿಕ ಪುನಶ್ವೇತನ ಕೇಂದ್ರದಲ್ಲಿ ದಾಖಲಾದವರಿಗೆ ನಷ್ಟಭತ್ಯೆ

Nutrition
Published on

ಬೆಂಗಳೂರು: ಪೌಷ್ಠಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ)ದಲ್ಲಿ ದಾಖಲಾಗುವ ಮಕ್ಕಳು ಮತ್ತು ತಾಯಂದಿರಿಗೆ ದಿನಗೂಲಿ ನಷ್ಟಭತ್ಯೆ ನೀಡಲು, ಜಿಲ್ಲಾ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ಅವಶ್ಯವಿರುವ ಅನುಧಾನವನ್ನು ರಾಜ್ಯ ವಲಯಗಳಡಿ ಸಂಭವನೀಯ ಉಳಿತಾಯವಾಗುವ ಅನುದಾನದಲ್ಲಿ ಭರಿಸಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್‌ಆರ್‌ಇಜಿ) ಮಾನದಂಡದ ಪ್ರಕಾರ ದಿನ ಒಂದಕ್ಕೆ ಮಗುವಿನ ತಾಯಿ ಅಥವಾ ಪೋಷಕರಿಗೆ ವೇತನ ನಷ್ಟ ಪರಿಹಾರ ಭತ್ಯೆಗಾಗಿ 370 ರೂ. ನೀಡಬೇಕು. ಅಪೌಷ್ಠಿಕತೆ ಹೊಂದಿರುವ ಪ್ರತಿ ಮಗುವಿಗೆ ದಿನ ಒಂದಕ್ಕೆ ಔಷಧಿಗಾಗಿ 125 ರೂ. ಮತ್ತು ಆಹಾರಕ್ಕಾಗಿ - 125 ರೂ. ನೀಡಲು ಅನುಮೋದನೆ ನೀಡಿದೆ.

ಇದೇವೇಳೆ ದಿನ ಒಂದಕ್ಕೆ ಮಗುವಿನ ತಾಯಿ ಅಥವಾ ಪೋಷಕರ ಆಹಾರಕ್ಕಾಗಿ 100 ರೂ. ನೀಡಲು ಅನುಮೋದನೆ ನೀಡಲಾಗಿದೆ. ಅಲ್ಲದೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾ ಪೌಷ್ಠಿಕ ವುನಕ್ಷೇತನ ಕೇಂದ್ರಗಳಲ್ಲಿ ದಾಖಲಾಗುವ ಮಕ್ಕಳ ತಾಯಂದಿರಿಗೆ ಅಥವಾ ಪೋಷಕರಿಗೆ 100 ರೂ. ವೇತನ ನಷ್ಟ ಪರಿಹಾರ ಭತ್ಯೆ ನೀಡಬೇಕೆಂದು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net