ಸಮುದಾಯ ಭವನಕ್ಕೆ ನಿವೇಶನ ನೀಡಿ

15HBH. 2
ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಕೆ.ನೇಮಿರಾಜ್‌ನಾಯ್ಕಗೆ ಕುರುಬ ಸಮುದಾಯದಿಂದ ಮನವಿ ಸಲ್ಲಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಶಿವರಾಜ, ಮಾಜಿ ಅಧ್ಯಕ್ಷ ಬುಡ್ಡಿಬಸವರಾಜ, ಪ್ರಮುಖರಾದ ಮೈಲಾರಪ್ಪ, ಚಿಂತ್ರಪಳ್ಳಿ ಗೋಣೆಪ್ಪ, ಪುರಸಭೆ ಮಾಜಿ ಸದಸ್ಯ ಮೃತ್ಯುಂಜಯ ಬಾದಾಮಿ, ಗುರುಗಳಾದ ಕೊಟ್ರದೇವ್ರ, ಒಬಿಸಿ ಜಿಲ್ಲಾಧ್ಯಕ್ಷ ಟಿ.ಮಹೇಶ, ತಾಪಂ ಮಾಜಿ ಸದಸ್ಯ ಪ್ರಭಾಕರ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಕನಕದಾಸರ ಪುತ್ಥಳಿ ನಿರ್ಮಾಣದ ಬೇಡಿಕೆ ಇದುವರೆಗೂ ಈಡೇರಿಲ್ಲ. ಜನಪ್ರತಿನಿಧಿಗಳು ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ ಎಂದು ಕುರುಬ ಸಮಾಜದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಬುಡ್ಡಿ ಬಸವರಾಜ ದೂರಿದರು.

ಪಟ್ಟಣದ ಬೈಪಾಸ್ ವೃತ್ತದ ಬಳಿ ಕನಕದಾಸರ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಕುರಿತು ಕುರುಬ ಸಮಾಜದ ತಾಲೂಕು ಘಟಕದಿಂದ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಕೆ.ನೇಮಿರಾಜ್‌ನಾಯ್ಕಗೆ ಮನವಿ ಸಲ್ಲಿಸಿ ಮಾತನಾಡಿದರು. ಪಟ್ಟಣದಲ್ಲಿ ಬೃಹತ್ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದೊಂದಿಗೆ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಕೆ.ನೇಮಿರಾಜ್‌ನಾಯ್ಕ ಮಾತನಾಡಿ, ಶೀಘ್ರದಲ್ಲೇ ಕನಕದಾಸರ ಕಂಚಿನ ಪುತ್ಥಳಿಯ ಸ್ಥಾಪನೆಗೆ 50 ಲಕ್ಷ ರೂ. ಅನುದಾನ ನೀಡಿ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗುವುದು. ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೋಡುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗುವುದು ಎಂದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶಿವರಾಜ, ಪುರಸಭೆ ಮಾಜಿ ಸದಸ್ಯ ಮೃತ್ಯುಂಜಯ ಬಾದಾಮಿ, ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ತಾ.ಪಂ.ಮಾಜಿ ಸದಸ್ಯ ಪ್ರಭಾಕರ, ಪಿಎಲ್‌ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ರಾಘವೇಂದ್ರ, ಸೊನ್ನ ಗ್ರಾ.ಪಂ. ಸದಸ್ಯರಾದ ರವಿ, ಪ್ರಕಾಶ, ಹಂಪಾಪಟ್ಟಣ ಸದಸ್ಯ ನಾಗರಾಜ್,

ಪ್ರಮುಖರಾದ ಮೈಲಾರಪ್ಪ, ಚಿಂತ್ರಪಳ್ಳಿ ಗೋಣೆಪ್ಪ, ಸದ್ಯೋಜಾತಪ್ಪ, ಹೊಳಗುಂದಿ ಹನುಮಜ್ಜ, ಸಿದ್ದಪ್ಪ, ಹರೇಗೊಂಡನಹಳ್ಳಿ ಹುಲುಗಪ್ಪ, ಟಿ.ಕೊಟ್ರೇಶ, ಮಧುಸೂದನ್, ನಾಣಿಕೆರೆ ದೊಡ್ಡಬಸಪ್ಪ, ಉಲವತ್ತಿ ವೆಂಕಟೇಶ, ಪರಶುರಾಮ. ಡಿ.ದಾನಪ್ಪ, ನೇತ್ರಾನಂದಪ್ಪ, ಮೋರ‌್ನಾಳ್ ಗುರಿಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net