ಕೋಮು ವೈಷಮ್ಯ ಪೋಸ್ಟ್​, ಶಕುಂತಲಾ ವಿರುದ್ಧ ಎಫ್ಐಆರ್

Shakuntala11
Published on

ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯ ಮೂಡಿಸುವ ಪೋಸ್ಟ್​ ಮಾಡಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್​ ವಿರುದ್ಧ ನಗರದ ಜಯನಗರ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಶಕುಂತಲಾ ವಿರುದ್ಧ ಈ ಹಿಂದೆಯೂ ಸಾಕಷ್ಟು ಸಲ ಇಂತಹದೇ ಪ್ರಕರಣಗಳು ದಾಖಲಾಗಿವೆ.

ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಹಾಕಿದ್ದ ಕೋಮು ವೈಷಮ್ಯದ ಪೋಸ್ಟ್​ "ಯೋಗಿಜೀ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಅಲ್ಲಾ ಸಹಾಯಕ್ಕೆ ಬರಲಿಲ್ಲಾ' ಆದ್ದರಿಂದ ಜೀವ ಹೋಗಿದೆ ಅಷ್ಟೇ, ಮೇಲೆ ಹೋದಮೇಲೆ 72 ಸುಂದರಿಯರು ಸಿಗ್ತಾರೆ ಎಂದು ಅನ್ಯ ಧರ್ಮದ ವಿರುದ್ದ ಶಕುಂತಲಾ ಪೋಸ್ಟ್​ ಹಾಕಿದ್ದರು ಎನ್ನಲಾಗಿದೆ.

ಕೋಮು ವೈಷಮ್ಯದ ಪೋಸ್ಟ್​ ಹಾಕಿದ ಹಿನ್ನೆಲೆಯಲ್ಲಿ ಪೊಲೀಸ್​ ಕಾನ್ಸ್ಟೇಬಲ್​ ಉಮಾಶಂಕರ್​ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಲಂ 299 ಬಿಎನ್​ ಎಸ್​ ಅಡಿ ಎಫ್ಐಆರ್ ದಾಖಲಾಗಿದೆ. ಹಿಂದೊಮ್ಮೆ ಒಡಿಶಾದಲ್ಲಿ ನಡೆದಿದ್ದ ರೈಲು ದುರಂತದ ಸಮೀಪ ಮಸೀದಿ ಇತ್ತು ಎಂದು ಎಡಿಟ್​ ಮಾಡಿದ್ದ ಪೋಸ್ಟ್​ ಹಂಚಿಕೊಂಡಿದ್ದ ಇಂತಹದೇ ವೈಷಮ್ಯದ ಪೋಸ್ಟ್​ ಹಾಕಿದ್ದರಿಂದ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಶಕುಂತಲಾ ಬಂಧನಕ್ಕೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net