

ಗಂಗೊಳ್ಳಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಗಂಗೊಳ್ಳಿ ಟಕ ವತಿಯಿಂದ ಶ್ರೀಸಾವಾನ್ಯರ ದಿನಾಚರಣೆ ಕಾರ್ಯಕ್ರಮ ಚರ್ಚಿನ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಗಂಗೊಳ್ಳಿ ಕೊಸೆಸಾಂವ್ ವಾತೆ ಚರ್ಚಿನ ಧರ್ಮಗುರು ತೋಮಸ್ ರೋಶನ್ ಡಿಸೋಜ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಗಂಗೊಳ್ಳಿ ಟಕ ಅಧ್ಯಕ್ಷ ಎಡ್ವರ್ಡ್ ಫೆನಾರ್ಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಅಲ್ಮೇಡಾ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿ ವಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಶುಭಾಶಂಸನೆಗೈದರು.
ಕಾರ್ಯಕ್ರಮದ ಸಂಚಾಲಕ ಓವಿನ್ ರೆಬೆಲ್ಲೊ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಕಥೊಲಿಕ್ ಸ್ತ್ರೀ ಸಂಟನೆ ಉಡುಪಿ ಜಿಲ್ಲೆ ಹಾಗೂ ಸುಗಮ್ಯ ಮಹಿಳಾ ಒಕ್ಕೂಟದ ಪ್ರೀತಿ ರ್ನಾಂಡಿಸ್, ಗಂಗೊಳ್ಳಿ ಭಾರತೀಯ ಕಥೊಲಿಕ್ ಯುವ ಸಂಟನೆ ಅಧ್ಯಕ್ಷ ವಿನ್ಸಿಟಾ ಲೋಬೊ, ಗಂಗೊಳ್ಳಿ ಕಥೊಲಿಕ್ ಸ್ತ್ರೀ ಸಂಟನೆ ಅಧ್ಯಕ್ಷ ಅನಿತಾ ರ್ನಾಂಡಿಸ್, ಗಂಗೊಳ್ಳಿ ಸೆಕ್ಯೂಲರ್ ಪ್ರಾನ್ಸಿಸ್ಕನ್ ಸಭೆ ಅಧ್ಯಕ್ಷ ರೋಜಿ ರ್ನಾಂಡಿಸ್, ಗಂಗೊಳ್ಳಿ ವೈಸಿಎಸ್ ಸಂಟನೆ ಅಧ್ಯಕ್ಷ ಕ್ಯಾರಲ್ ರೆಬೆರೊ ಹಾಗೂ ಪವಿತ್ರ ಶಿಲುಬೆ ವಾಳೆಯ ಗುರಿಕಾರ ಐವನ್ ಕಾರ್ಡಿನ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ಎಡ್ವರ್ಡ್ ಫರ್ನಾಂಡೀಸ್ ಸ್ವಾಗತಿಸಿ, ಜಾನೆಟ್ ಡಯಾಸ್ ವಂದಿಸಿದರು. ಆನ್ನಿ ಕ್ರಾಸ್ಟೊ ವರದಿ ವಾಚಿಸಿದರು. ಕ್ಲೇರಾ ರೆಬೆರೊ ಅತಿಥಿಗಳನ್ನು ಪರಿಚಯಿಸಿದರು. ಟಕ ಕಾರ್ಯದರ್ಶಿ ಸೈಮನ್ ಡಿಸೋಜ ಸನ್ಮಾನಿತರನ್ನು ಪರಿಚಯಿಸಿದರು. ರೆನಿಟಾ ಬಾರ್ನೆಸ್ ನಿರೂಪಿಸಿದರು.