ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಮಾಹಿತಿ ಕಾರ್ಯಕ್ರಮ

kukke
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಸಹಯೋಗದೊಂದಿಗೆ ವಾಣಿಜ್ಯಶಾಸ್ತ್ರ ವಿಭಾಗ ವತಿಯಿಂದ ನೇವಿಗೇಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಪ್ರಾಂಶುಪಾಲ ಡಾ.ದಿನೇಶ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸುಬ್ರಹ್ಮಣ್ಯ ಶಾಖೆ ಸಹಾಯಕ ಪ್ರಬಂಧಕ ಸುನೀಲ್ ಕುಮಾರ್ ನೇವಿಗೇಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಐಕ್ಯೂಎಸಿ ಸಂಯೋಜಕಿ ಲತಾ ಬಿ.ಟಿ. ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗ ಉಪನ್ಯಾಸಕಿ ಕೃತಿಕಾ ಸ್ವಾಗತಿಸಿದರು. ಜೀವಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net