

ಮುನವಳ್ಳಿ: ಗ್ರಾಹಕರು, ರೈತರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ದಿ.ಮುನವಳ್ಳಿ ಅರ್ಬನ್ ಕೋ&ಆಪ್ ಕ್ರೆಡಿಟ್ ಸೊಸೈಟಿ ಉತ್ತಮ ಸಹಕಾರ ಸೇವೆ ಒದಗಿಸುತ್ತಿದೆ ಎಂದು ಸೊಸೈಟಿ ಅಧ್ಯ ರವೀಂದ್ರ ಯಲಿಗಾರ ಹೇಳಿದರು.
ಪಟ್ಟಣದ ಮುನವಳ್ಳಿ ಅರ್ಬನ್ ಕೋ&ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 32ನೇ ವಾರ್ಷಿಕ ಮಹಾಸಭೆಯ ಅಧ್ಯತೆ ವಹಿಸಿ ಮಾತನಾಡಿ, ಸಹಕಾರ ೇತ್ರದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಬಹುಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಂದ ಪ್ರಗತಿಗೆ ಪೂರಕ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆ ನಿರ್ದೇಶಕ ಎಸ್.ಎಸ್.ಮುಗಳಿ ಮಾತನಾಡಿ, ಆಡಳಿತ ಮಂಡಳಿಯ ದೂರದೃಷ್ಟಿ, ಸಿಬ್ಬಂದಿ ಪರಿಶ್ರಮ ಹಾಗೂ ಗ್ರಾಹಕರ ಸಹಕಾರ ಲವಾಗಿ ಸೊಸೈಟಿ ಪ್ರಗತಿಪಥದತ್ತ ಸಾಗಿದೆ ಎಂದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವಿರಾಜ ಕೊಳಕಿ ವಾರ್ಷಿಕ ವರದಿ ಮಂಡಿಸಿ 3,119 ಸದಸ್ಯರನ್ನು ಹೊಂದಿ 30.16 ಕೋಟಿ ರೂ. ಠೇವಣಿ, 27.46 ಕೋಟಿ ರೂ. ಸಾಲ ವಿತರಿಸಿದೆ. ಪ್ರಸಕ್ತ ಸಾಲಿನಲ್ಲಿ 43.52 ಲ ರೂ. ನಿವ್ವಳ ಲಾಭ ಗಳಿಸಿದೆ. ಷೇರು ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಜನಾ ಹುಲ್ಲೂರ ಹಾಗೂ ಕೀರ್ತಿ ಲಮಾಣಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು.
ಎಂ.ಆರ್.ಗೋಪಶೆಟ್ಟಿ, ರಾಜೇಂದ್ರ ವಾಲಿ, ಬಸವರಾಜ ಹೊಂಗಲ, ಎ.ಎಸ್.ಗಾಣಗಿ, ವೀರಣ್ಣ ಕಮ್ಮಾರ. ನಿರ್ದೇಶಕರಾದ ನಾಗಪ್ಪ ಯಲಿಗಾರ, ನಾಗಪ್ಪ ಕಾಮಣ್ಣವರ, ಎಸ್.ಎಸ್.ಮುಗಳಿ, ಅಮಿತ ಕರೀಕಟ್ಟಿ, ಜಯದೇವ ಅಷ್ಟಗಿಮಠ, ನಿರ್ಮಲಕುಮಾರ ವನಕುದರಿ, ಮಂಜುನಾಥ ದೊಡ್ಡಮನಿ, ಅಂಬರೀಷ್ ಯಲಿಗಾರ, ಎ.ಎಸ್.ಗಾಣಗಿ, ಸಿ.ಬಿ.ಅಂಗಡಿ, ಬಿ.ಎಸ್.ಪಠಾಣಿ, ಆರ್.ಎಲ್.ಗೌಡರ, ಎಸ್.ಎಸ್.ಪಾಟೀಲ, ಎಂ.ಎಂ.ಮುಲ್ಲಾ, ಡಿ.ಆರ್.ಪಾಟೀಲ, ವ್ಯವಸ್ಥಾಪಕ ಶಿವಾನಂದ ಮದ್ದಾನಿ, ಶಿವಾನಂದ ವಾಲಿ, ನಿಶಾಂತ ಕೋರಿ, ರುದ್ರಯ್ಯ ಚುಳಕಿಮಠ, ಪಂಚಪ್ಪ ಮಾಟನವರ, ಚಂದ್ರಶೇಖರ ಕುಂಬಾರ, ಈಶ್ವರ ಶಿವಪೇಟಿ, ವಿನಾಯಕ ರೇವಡಗಿ, ರವಿ ಮೂಲಿಮನಿ, ಪ್ರವಿಣ ಹಲ್ಯಾಳ, ಮಹಾಂತೇಶ ಪಟ್ಟೇದ, ಬಾಪುಸಾಬ ಬಾರಿಗಿಡದ, ವಿಲಾಸ ತುಡುವೇಕರ ಇತರರಿದ್ದರು.