ಅರ್ಹರಿಗೆ ಹಕ್ಕುಪತ್ರ ವಿತರಣೆಗೆ ಬದ್ಧ

gan-3
Published on

ಕುಂದಾಪುರ: ವರ್ಷಗಳಿಂದ ವಿವಿಧ ಹಂತದ ಅಧಿಕಾರಿಗಳ ಬಳಿ 94ಸಿ ಅರ್ಜಿ ಸಮರ್ಪಕ ವಿಲೇವಾರಿ ಆಗದೇ ವಿಳಂಬವಾಗುತ್ತಿದ್ದರಿಂದ ಗ್ರಾಮೀಣ ಭಾಗದ ಬಡ ಕುಟುಂಬ ಸರ್ಕಾರಿ ಯೋಜನೆಯಿಂದ ವಂಚಿತರಾಗಿದ್ದಾರೆ. ಇಂದು ಅಂತಹ 32 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಕ್ಷೇತ್ರದ ವಂಡ್ಸೆ ಹೋಬಳಿ ಬಾಕಿ ಉಳಿದ ಎಲ್ಲ ಅರ್ಹರಿಗೂ ಹಕ್ಕುಪತ್ರ ದೊರಕಿಸಿ ಕೊಡಲು ಬದ್ಧ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಕುಂದಾಪುರ ತಾಲೂಕು ಕಚೇರಿಯಲ್ಲಿ ವಂಡ್ಸೆ ಹೋಬಳಿ ಗ್ರಾಮಗಳಿಗೆ ಸಂಬಂಧಿಸಿದಂತೆ ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡ ಅರ್ಹ 32 ಫಲಾನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರ ಗುರುವಾರ ವಿತರಿಸಿ ಮಾತನಾಡಿದರು.

ಕುಂದಾಪುರ ತಹಸೀಲ್ದಾರ್ ಮಲ್ಲಿಕಾರ್ಜುನ್, ಉಪತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಮತ್ತು ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net