2ರಂದು ಬೃಹತ್ ರಕ್ತದಾನ ಶಿಬಿರ

Blood camp
Published on

ಕೊಕ್ಕರ್ಣೆ: ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಉಡುಪಿ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಹಾಗೂ ಕುಂದಾಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮಾರ್ಚ್ 2ರಂದು ನೂಜಿ ಹಲುವಳ್ಳಿ ಶ್ರೀ ದುರ್ಗಾಪರಮೇಶ್ವರಿ ಜೋಡುಗದ್ದುಗೆ ಅಮ್ಮನವರ ದೇವಸ್ಥಾನದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆನಂದ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಮಹೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಸುನೀತಾ ಡಿ.ಶೆಟ್ಟಿ, ದಿವಾಕರ್ ಪಿ.ಎಂ., ಸತೀಶ್ ಸಾಲ್ಯಾನ್, ಕೃಷ್ಣ ನಾಯ್ಕ ಕರ್ಜೆ, ಭುಜಂಗ ನಾಯ್ಕ ಮತ್ತಿತರರು ಉಪಸ್ಥಿತರಿರುವರು. ಭಜನಾ ತಂಡದಿಂದ ಸಾಮೂಹಿಕ ಕುಣಿತ ಭಜನೆ ಹಾಗೂ ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ, ಗೌರವ ಸಮರ್ಪಣೆ, ವಿಶೇಷ ಚೇತನರಿಗೆ ನೆರವು ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಉಮೇಶ್ ಎ.ನಾಯ್ಕ ಚೇರ್ಕಾಡಿ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್, ಪ್ರಸಾದ್‌ರಾಜ್ ಕಾಂಚನ್, ಅಮುಜಿ ನರಸಿಂಹ ನಾಯ್ಕ, ಪ್ರತೀಶ ನಾಯ್ಕ ಹಲುವಳ್ಳಿ, ಮನೋರಮಾ ಪಾಂಡುರಂಗ ನಾಯ್ಕ ಮತ್ತಿತರರು ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net