ವಾಣಿಜ್ಯ ಪರವಾನಗಿ ಕಡ್ಡಾಯ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರು ವಾಣಿಜ್ಯ ಪರವಾನಗಿ ಪಡೆದುಕೊಳ್ಳಬೇಕು ಎಂದು ನಗರಸಭೆ ಆಯುಕ್ತ ರಮೇಶ್​ ಮನವಿ ಮಾಡಿದ್ದಾರೆ.

ನಗರಸಭೆ ವಿವಿಧ ಸೌಲಭ್ಯಯಗಳನ್ನು ಒದಗಿಸಲು ವಾರ್ಡ್​ವಾರು ಮಳಿಗೆ (ಸ್ಯಾಟಲ್​) ಅಳವಡಿಸಲಾಗಿದೆ. ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿರುವವರಿಂದ ಕಂದಾಯ ತೆರಿಗೆ, ಬಾಡಿಗೆ ಕರಾರು ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಪಡೆದು ವಾಣಿಜ್ಯ ಪರವಾನಗಿ ನೀಡಲಾಗುತ್ತಿದೆ. ಆದ್ದರಿಂದ ವರ್ತಕರು ನಗರಸಭೆಯಿಂದ ವಾಣಿಜ್ಯ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಕಾನೂನು ಬದ್ಧವಾಗಿ ವ್ಯಾಪಾರ ನಡೆಸಬೇಕು. ಆ ಮೂಲಕ ನಗರಸಭೆ ಆದಾಯ ವೃದ್ಧಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಪರಿಸರ ಅಭಿಯಂತ ಶಿವಶಂಕರ್​ ಮಾತನಾಡಿ, ಪರವಾನಗಿ ಪಡೆದು ವಹಿವಾಟು ನಡೆಸುವುದರಿಂದ ನಗರದಲ್ಲಿರುವ ವರ್ತಕರ ಸ್ಪಷ್ಟ ಮಾಹಿತಿ ದೊರೆಯಲಿದೆ. ಕಾನೂನು ಚೌಕಟ್ಟಿಗೆ ಒಳಪಡುವುದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಆರೋಗ್ಯ ಉಪ ನಿರೀಕ್ಷಕರಾದ ಶ್ವೇತಾ, ಸಣ್ಣಮೀರ್​, ಗಣಕಯಂತ್ರ ಸಹಾಯಕ ಶಾಂತಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net