

ಕೋಟ: ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಾಮರ್ಸ್ ಕ್ಲಬ್‌ನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು.
ವೀ ರೀಚ್ ಸಂಸ್ಥೆ ಮುಖ್ಯಸ್ಥ, ವೃತ್ತಿಪರ ಕಂಪೆನಿ ಸೆಕ್ರೆಟರಿ ಸಂತೋಷ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ಸಿಎ ಮತ್ತು ಸಿಎಸ್ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಮಂಗಳೂರು ವಲಯದ ಕಂಪೆನಿ ಸಕ್ರಟರಿ ಎಕ್ಸಿಕ್ಯೂಟಿವ್ ಶಂಕರ ಉಪಸ್ಥಿತರಿದ್ದರು. ಸಿಎ ಮತ್ತು ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನುಪುರಸ್ಕರಿಸಲಾಯಿತು. ಕಾಮರ್ಸ ವಿಭಾಗದ ಮುಖ್ಯಸ್ಥ ಸಂಜೀವ ಜಿ., ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಅಂಬಿಕಾ ವಂದಿಸಿದರು. ಕ್ಲಬ್ ಸಂಚಾಲಕಿ ಜಯಶ್ರೀ ನಿರೂಪಿಸಿದರು.