ಕಮಲಶಿಲೆ ಮೇಳದ ತಿರುಗಾಟ ಆರಂಭ

yakshagana
ಶ್ರೀ ಸಾನ್ನಿಧ್ಯದಲ್ಲಿ ಯಕ್ಷಗಾನ ಸೇವೆಯೊಂದಿಗೆ ಮೇಳದ ತಿರುಗಾಟ ಮಂಗಳವಾರದಿಂದ ಆರಂಭಗೊಂಡಿತು.
Published on

ಕಮಲಶಿಲೆ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ವತಿಯಿಂದ ನಡೆಸಲ್ಪಡುವ ಶ್ರೀಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2024-25ನೇ ಸಾಲಿನ ತಿರುಗಾಟದ ಪ್ರಥಮ ದೇವರ ಸೇವೆ ಆಟದ ಪ್ರಯುಕ್ತ ಸಾನ್ನಿಧ್ಯದಲ್ಲಿ ಶ್ರೀ ಗಣಪತಿ ಹೋಮ, ಮಹಾಗಣಪತಿ ಪೂಜೆ, ರಾತ್ರಿ ಯಕ್ಷಗಾನ ಸೇವೆಯೊಂದಿಗೆ ಮೇಳದ ತಿರುಗಾಟ ಮಂಗಳವಾರದಿಂದ ಆರಂಭಗೊಂಡಿತು.

ಆನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಧರ್ಮದರ್ಶಿ ಮತ್ತು ವ್ಯವಸ್ಥಾಪಕ ಆಜ್ರಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರು ಭಟ್, ಅರ್ಚಕ ವೃಂದ, ಸಿಬ್ಬಂದಿ, ನೌಕರ ವೃಂದ, ಮೇಳದ ವ್ಯವಸ್ಥಾಪಕ ಸೌಡ ಗೋಪಾಲ, ಮೇಳದ ಪ್ರೋತ್ಸಾಹಕ ಎಸ್.ಕೃಷ್ಣಮೂರ್ತಿ ಭಟ್ ಮತ್ತು ಸಹೋದರರು ಸಿದ್ದಾಪುರ, ಎಚ್.ನಾರಾಯಣ ಶೆಟ್ಟಿ ಜನ್ಸಾಲೆ, ಮೇಳದ ಪ್ರೋತ್ಸಾಹಕರು, ಹಿಮ್ಮೇಳದವರು ಹಾಗೂ ಕಲಾವಿದರು, ನೌಕರ ವೃಂದವರು, ಯಕ್ಷಭಿಮಾನಿಗಳು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net