ಸಂಸ್ಥಾಪಕಿ ದಿ.ಶಾರದಾ ಪುಣ್ಯಸ್ಮರಣೆ

Published on

ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದ ಸಂಸ್ಥಾಪಕಿ ದಿ.ಶಾರದಾ ಅವರ 8ನೇ ವರ್ಷದ ಪುಣ್ಯತಿಥಿ, ಸಂಸ್ಮರಣಾ ಕಾರ್ಯಕ್ರಮ ಬುಧವಾರ ನಡೆಯಿತು. ಸಾಮೂಹಿಕ ಪ್ರಾರ್ಥನೆ ಬಳಿಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ರಮೇಶ್ ಶೆಣೈ, ಉದ್ಯಮಿ ಸತೀಶ್ ಎಡನೀರು, ಸವಿತಾ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ನೀರ್ಚಾಲು, ಗ್ರಾಪಂ ಸದಸ್ಯೆ ಸ್ವಪ್ನ ಉಪಸ್ಥಿತರಿದ್ದರು. ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ಕಳೇರಿ ಸ್ವಾಗತಿಸಿದರು. ಗಣಪತಿ ಪ್ರಸಾದ್ ಕುಳವರ್ಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net