

ಹೂವಿನಹಡಗಲಿ: ಅನಾದಿ ಕಾಲದ ಜನರು ಪ್ರಕೃತಿಯನ್ನು ಆರಾಧಿಸುವ ಮೂಲಕ ದೇವರನ್ನು ಸ್ಮರಿಸುತ್ತ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದರು ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಆಯುಧ ಪೂಜೆ, ವಿಜಯದಶಮಿ ಸಂಭ್ರಮ
ಪಟ್ಟಣದ ದೊಡ್ಡಬಸವೇಶ್ವರ ಸ್ವಾಮಿ ಗದ್ದುಗೆಯಲ್ಲಿ ವಿಜಯದಶಮಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ವಜರು ಹಬ್ಬದ ಹೆಸರಿನಲ್ಲಿ ವೈಜ್ಞಾನಿಕವಾದ ಧಾರ್ಮಿಕ ಆಚರಣೆ ಮಾಡುತ್ತಿದ್ದರು. ನಮ್ಮಲ್ಲಿನ ದ್ವೇಷ ಹಾಗೂ ಅಸೂಯೆ ಹೋಗಲಾಡಿಸುವ ಉದ್ದೇಶದಿಂದ ವಿಜಯದಶಮಿಯಂದು ಬನ್ನಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿದರು. ಸೋಗಿ ಗ್ರಾಮದ ಎ.ಎಂ.ಹಾಲಯ್ಯ ಶಾಸ್ತ್ರಿ, ದೊಡ್ಡಬಸವೇಶ್ವರ ಗದ್ದುಗೆ ಸಮಿತಿಯ ಡಾ.ಜಂಬಣ್ಣ ಯಲಗಚ್ಚಿನ, ಪ್ರಮುಖರಾದ ಡಾ.ಗುರುಪ್ರಸಾದ ಯಲಗಚ್ಚಿನ, ಪಿ.ಎಂ.ಶ್ರೀಧರಯ್ಯ, ಎಚ್.ಎಂ.ಗುರುಬಸವರಾಜಯ್ಯ, ನಾಗೇಂದ್ರಯ್ಯ ತೌಡೂರು, ಟಿ.ದೇವಪುತ್ರಪ್ಪ, ವೈ.ವಾಮನಗೌಡ, ದೇವೇಂದ್ರಪ್ಪ ಇತರರಿದ್ದರು.