

ಹೊಸಪೇಟೆ: ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಆಯುಧ ಪೂಜೆ ಹಾಗೂ ಶುಕ್ರವಾರ ವಿಜಯದಶಮಿಯನ್ನು ಸಂಭ್ರಮದೊAದಿಗೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಆಯಾ ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆದವು. ಹೊಸ ಬಟ್ಟೆ ತೊಟ್ಟವರು ಸಂಜೆ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಪರಸ್ಪರ ಬೆಳ್ಳಿ, ಬಂಗಾರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು. ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಊರ ಹೊರವಲಯಕ್ಕೆ ತೆರಳಿ ಬನ್ನಿ ಮುರಿಯುವ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವೇಳೆ ಆಯುಧ ಪೂಜೆಯೂ ನಡೆಯಿತು. ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ವಿಶೇಷವಾಗಿ ನಡೆಯಿತು. ಪೊಲೀಸರು ಸಮವಸ್ತç ರಹಿತ ಠಾಣೆಗಳಲ್ಲಿ ಸಂಭ್ರಮಿಸಿದರು.
ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲಗಳಿಗೆ ಭಕ್ತರ ದಂಡು ಕಂಡು ಬಂತು. ಜಗನ್ಮಾತೆ, ದೇವಿ ದುರ್ಗದೇವಿಯ ಒಂಭತ್ತು ದಿನಗಳ ನವರಾತ್ರಿಯ ವಿಶೇಷ ಪೂಜೆ, ಆರಾಧನೆಯ ಬಳಿಕ ಗುರುವಾರ ನಗರ ಸೇರಿ ಜಿಲ್ಲೆಯಾದ್ಯಂತ ಸಂಭ್ರಮದ ವಿಜಯದಶಮಿ ಆಚರಣೆ ಜರುಗಿತು. ಈ ನಿಮಿತ್ತ ಜಿಲ್ಲೆಯಾದ್ಯಂತ ಎಲ್ಲೆಡೆ ಬನ್ನಿ ಹರಿದು, ಬಂಗಾರ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಪರಸ್ಪರ ಬಂಗಾರ ಕೊಟ್ಟು-ಕೊಂಡು ಎಲ್ಲರ ಬದುಕು ಬಂಗಾರದAತಿರಲಿ ಎಂದು ಶುಭಕೊರಿದರು.