ಹುಲಿ ಸೆರೆಗೆ ಮುಂದುವರಿದ ಕೊಂಬಿಂಗ್

Oplus_0
Oplus_0
Published on

ಯಳಂದೂರು: ತಾಲೂಕಿನ ಗೌಡಹಳ್ಳಿ-ಮಲಾರಪಾಳ್ಯದ ಬಳಿಯ ಕಾಡಂಚಿನಲ್ಲಿ ಕಾಣಿಸಿಕೊಂಡಿದ್ದ ಹುಲಿಗಾಗಿ ಅರಣ್ಯ ಇಲಾಖೆ ಸೋಮವಾರವೂ ಕೊಂಬಿಂಗ್ ನಡೆಸಿದೆ.

ಕರುವಿನ ಗುಡ್ಡದ ಬಳಿ ಕಾಣಿಸಿಕೊಂಡ ಹುಲಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಗೌಡಹಳ್ಳಿ ಗ್ರಾಮದಲ್ಲಿ ಹಸುವಿನ ಕಳೇಬರ ಅರ್ಧಂಬರ್ದ ಪತ್ತೆಯಾಗಿತ್ತು. ಇದರಿಂದ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ರೈತರಿಗೆ ಅಭಯ ನೀಡಿ ಗಸ್ತು ಹೆಚ್ಚಿಸಿದ್ದು ಹುಲಿ ಶೋಧಕ್ಕಾಗಿ ಕಾರ್ಯಾಚರಣೆ ನಡೆಸಿದೆ.

ಈ ಗ್ರಾಮಗಳ ಜತೆಯಲ್ಲಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮವಾದ ಮದ್ದೂರು ಗ್ರಾಮದ ಸುತ್ತಮುತ್ತಲೂ ಕೂಡ ಕೊಂಬಿಂಗ್ ನಡೆಸಲಾಗಿದೆ. ಆದರೆ ಇಲ್ಲಿ ಹುಲಿಯ ಯಾವುದೇ ಹೆಜ್ಜೆ ಗುರುತು ಲಭಿಸಿಲ್ಲ. ಈ ನಡುವೆ ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದರೆ ಇಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಇದು ಹುಲಿಯ ಹೆಜ್ಜೆ ಗುರುತಿನ ಬಗ್ಗೆ ಇನ್ನೂ ಖಚಿತ ಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net