ಬಣ್ಣವಿಲ್ಲದ ಮಣ್ಣಿನ ಎತ್ತುಗಳಿಗೆ ಬೇಡಿಕೆ

24KMP 01
ಕಂಪ್ಲಿಯ ನಡುವಿನ ಮಸೀದಿ ಬಳಿ ಮಣ್ಣಿನ ಎತ್ತುಗಳನ್ನು ಮಾರಾಟಕ್ಕೆ ಇಟ್ಟಿರುವುದು.
Published on

ಕಂಪ್ಲಿ: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮನೆಗಳಲ್ಲಿ ಪೂಜಿಸಲು ಮಣ್ಣಿನ ಎತ್ತುಗಳ ಮಾರಾಟ ಪಟ್ಟಣದಲ್ಲಿ ಮಂದಗತಿಯಲ್ಲಿ ಸಾಗಿದೆ. ಪರಿಸರ ಪ್ರಿಯರು ಬಣ್ಣವಿಲ್ಲದ ಹಸಿ ಮಣ್ಣಿನ ಎತ್ತುಗಳನ್ನು ಕೊಳ್ಳಲು ಮುಂದಾಗಿದ್ದಾರೆ.

ನಡುವಲ ಮಸೀದಿ, ರಾಮಲಿಂಗ ದೇವಸ್ಥಾನ ಸೇರಿ ನಾನಾ ಕಡೆ ಮಣ್ಣಿನ ಹಾಗೂ ಪಿಒಪಿ ಎತ್ತುಗಳು ಮಾರಾಟಗೊಂಡವು. ಮಣ್ಣಿನ ಸಾಧಾರಣ ಗಾತ್ರದ ಬಣ್ಣವಿಲ್ಲದ ಜೋಡಿ ಎತ್ತುಗಳು ಮತ್ತು ಗೋದಲಿಗೆ 40 ರೂ. ದೊಡ್ಡ ಗಾತ್ರದ ಎತ್ತುಗಳು 80 ರಿಂದ 100 ರೂ. ಪಿಒಪಿ ಮಣ್ಣಿನ ಎತ್ತುಗಳು 80 ರೂಪಾಯಿಗೆ ಜೋಡಿಯಂತೆ ಮಾರಾಟಗೊಂಡವು.

ಮಣ್ಣು, ಬಣ್ಣ ಹಾಗೂ ಕೂಲಿ ದರ ಹೆಚ್ಚಿದೆ. ಇದರಿಂದಾಗಿ ಜನರು ಖರೀರಿದಗೆ ಚೌಕಾಸಿ ಮಾಡುತ್ತಾರೆ. ಎತ್ತುಗಳನ್ನು ತಯಾರಿಸಿದ ಕೂಲಿಯೂ ಗಿಟ್ಟುತ್ತಿಲ್ಲ. ಕಲೆಗೆ ಬೆಲೆಯಿಲ್ಲದಂತಾಗಿದೆ. ಪಟ್ಟಣದಲ್ಲಿ ಸುಮಾರು 14 ಕುಟುಂಬಗಳು ಮಣ್ಣಿನ ಎತ್ತುಗಳನ್ನು ತಯಾರಿಸಿ ಮಾರುತ್ತಿದ್ದು, ಪೈಪೋಟಿ ಹೆಚ್ಚಿದೆ ಎಂದು ತಯಾರಕರು ಮತ್ತು ಮಾರಾಟಗಾರರಾದ ಕುದುರಿ ಸುಭದ್ರಮ್ಮ, ಚಿತ್ರಗಾರ ರವಿ, ರಾಮಕೃಷ್ಣಪ್ಪ, ರಾಮಕ್ಕ, ಕೆ.ರಾಘವೇಂದ್ರ, ಬೂಸಾರೆ ಸುಧಾ ವಾಸು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net