ಪಿಕ್‌ಅಪ್, ಬೈಕ್ ನಡುವೆ ಡಿಕ್ಕಿ

ಪಿಕ್‌ಅಪ್, ಬೈಕ್ ನಡುವೆ ಡಿಕ್ಕಿ
Published on

ಸೋಮವಾರಪೇಟೆ: ಪಿಕ್ ಅಪ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬೈಕ್ ಸವಾರ ಮೋರಿಕಲ್ಲು ಬಸವನಹಳ್ಳಿ ಗ್ರಾಮದ ವಿಷ್ಣು ಗಾಯಾಳು.ದ್ವಿಚಕ್ರ ವಾಹನ ಹಾಗು ಬಳಗುಂದ ಗ್ರಾಮದ ಯೋಗೇಶ್ ಚಾಲಿಸುತ್ತಿದ್ದ ಪಿಕ್‌ಅಪ್ ವಾಹನ ನಡುವೆ ತಣ್ಣೀರುಹಳ್ಳ ಗ್ರಾಮದ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ.

ಸ್ಥಳೀಯರು ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದ್ದು, ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುವಿನ ಸಂಬಂಧಿ ಸಿ.ಎಚ್.ರದೀಶ್ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net