ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ

ncc
ಉತ್ತರಖಂಡ ರಾಜ್ಯದ ಚಂಬನಗರದಲ್ಲಿ ಇತೀಚಿಗೆ ನಡೆದ ರಾಷ್ಟ್ರಮಟ್ಟದ ಏಕ್ ಭಾರತ ಶ್ರೇಷ್ಠ ಭಾರತ್ ಎನ್‌ಸಿಸಿ ಶಿಬಿರದ ಸ್ಪರ್ಧೆಗಳಲ್ಲಿ ಬಂಗಾರ, ಬೆಳ್ಳಿ ಪದಕ ಪಡೆದಿರುವ ಮಾನ್ವಿಯ ಬಾಷಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು.
Published on

ಮಾನ್ವಿ: ಪಟ್ಟಣದ ಬಾಷಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉತ್ತರಖಂಡ ರಾಜ್ಯದ ಚಂಬನಗರದಲ್ಲಿ ಇತೀಚಿಗೆ ನಡೆದ ರಾಷ್ಟ್ರಮಟ್ಟದ ಏಕ್ ಭಾರತ ಶ್ರೇಷ್ಠ ಭಾರತ್ ಎನ್‌ಸಿಸಿ ಶಿಬಿರದ ಸ್ಪರ್ಧೆಗಳಲ್ಲಿ ಬಂಗಾರ ಮತ್ತು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಪಾಟೀಲ್ ತಿಳಿಸಿದರು.


ಕರ್ನಾಟಕ ಮತ್ತು ಗೋವಾ ತಂಡದ ನಾಯಕನಾಗಿದ್ದ ಕಾಲೇಜಿನ ಬಿಎ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಶಿವಲಿಂಗ ಡಿಟಿಇ ಸೀನಿಯರ್ ಹಾಗೂ ತಗ್ ಆಫ್ವಾರ್ ವಿಭಾಗದಲ್ಲಿ ಶಾಂತಾ ಬಂಗಾರ ಪದಕ, ಆಂಜನೇಯ, ವೀರಭದ್ರಮ್ಮ ತಗ್ ಆಫ್ವಾರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ ಎಂದರು. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಡಾ.ಸುರೇಶ ಪಾಟೀಲ್, ಎನ್‌ಸಿಸಿ ಘಟಕದ ಸಂಯೋಜಕ ಡಾ.ರಾಘವೇಂದ್ರ ನಾಯಕ, ಉಪನ್ಯಾಸಕರಾದ ಶಿವಾರಾಜ, ಸಚಿನ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net